ಹೈನುಗಾರರ ಪರವಾಗಿ ಶ್ರಮಿಸುತ್ತಿವ ಕೆಎಂಎಫ್

08han-1 (dairy)
Published on

ಹನಗೋಡು: ಕರೊನಾ ನಡುವೆಯೂ ಕೆಎಂಎಫ್ ಹೈನುಗಾರರ ಪರವಾಗಿ ಶ್ರಮಿಸುತ್ತಿದೆ ಎಂದು ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ತಿಳಿಸಿದರು.

ಹೋಬಳಿಯ ಕಾಳಬೋಚನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಹುಣಸೂರು ತಾಲೂಕಿನಲ್ಲಿರುವ 187 ಸಂಘಗಳಿಂದ ನಿತ್ಯ 1.20 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ರಾಜ್ಯದ 14 ಒಕ್ಕೂಟಗಳಲ್ಲಿ ಮೈಸೂರು ಒಕ್ಕೂಟ ಪ್ರಥಮ ಸ್ಥಾನದಲ್ಲಿದೆ ಎಂದರು.

ಸಂಘದ ಅಧ್ಯಕ್ಷ ಡಿ.ಎ.ಪ್ರಭಾಕರ ಹೆಗ್ಗಡೆ, ಉಪಾಧ್ಯಕ್ಷ ಬೀರೇಗೌಡ, ಒಕ್ಕೂಟದ ಉಪವ್ಯವಸ್ಥಾಪಕ ಕರಿಬಸವರಾಜು, ವಿಸ್ತೀರ್ಣಾಧಿಕಾರಿ ಬಿ.ಗೌತಮ್, ತಾ.ಪಂ. ಮಾಜಿ ಸದಸ್ಯ ಕೆ.ಗಣಪತಿ, ಗ್ರಾಮದ ಮುಖಂಡರಾದ ಡಿ.ಎ.ರವಿಕುಮಾರ್, ಯ.ಯಲ್ಲಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net