

ಬೆಂಗಳೂರು:
ಸಾಲು ಸಾಲು ಹಬ್ಬಗಳಿದ್ದ ಹಿನ್ನೆಲೆಯಲ್ಲಿ ಏ.11ರಂದು 51.60 ಲಕ್ಷ ಲೀಟರ್ ಸ್ಯಾಚೆಟ್ ಹಾಲು, ಏ.6ರಂದು 13.56 ಲಕ್ಷ ಲೀಟರ್ ಮೊಸರು ಮಾರಾಟ ಮಾಡುವ ಮೂಲಕ ಕೆಎಂಎ್ ಹೊಸ ದಾಖಲೆ ಬರೆದಿದೆ.
ಕಳೆದ ಸಾಲಿಗೆ ಹೋಲಿಸಿದಲ್ಲಿ ಹಾಲು ಮಾರಾಟದಲ್ಲಿ ಶೇ.10 ರಷ್ಟು ಪ್ರಗತಿಯಾಗಿದ್ದು, ಅದೇ ರೀತಿ ಮೊಸರಿನ ಮಾರಾಟವು ಶೇ.22 ರಷ್ಟು ಪ್ರಗತಿಯಾಗಿದೆ ಎಂದು ಕೆಎಂಎ್ ಎಂಡಿ ಎಂ.ಕೆ.ಜಗದೀಶ್ ತಿಳಿಸಿದ್ದಾರೆ.
ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳಿಗೂ ಸಹ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಪ್ರತಿದಿನ ಅಂದಾಜು 1.5 ಲಕ್ಷ ಲೀಟರ್ ಮಾರಾಟ ಮಾಡಲಾಗುತ್ತಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಶೇ.30 ರಷ್ಟು ಹೆಚ್ಚಿಗೆಯಾಗಿದೆ. ಕಳೆದ ಮಾರ್ಚ್‌ಗೆ ಹೋಲಿಸಿದಾಗ ಶೇ.36 ರಷ್ಟು ನಂದಿನಿ ಐಸ್ ಕ್ರೀಂ ಮಾರಾಟ ಹೆಚ್ಚಿಗೆಯಾಗಿದ್ದು, ಪ್ರತಿದಿನ ಸರಾಸರಿ 25439 ಲೀಟರ್ ಐಸ್ ಕ್ರೀಂ ಮಾರಾಟವಾಗುತ್ತಿದೆ ಎಂದು
ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಎಂಎ್ ಹೈನೋದ್ಯಮದಲ್ಲಿ ರಾಷ್ಟ್ರದಲ್ಲಿಯೇ 2ನೇ ಸ್ಥಾನದಲ್ಲಿದ್ದು, ದಕ್ಷಿಣ-ಭಾರತದಲ್ಲಿಯೇ ಆಗ್ರರಾಜ್ಯ ಸಂಸ್ಥೆಯಾಗಿದೆ ಕಾರ್ಯನಿರ್ವಹಿಸುತ್ತಿರುತ್ತದೆ. 5 ದಶಕಗಳಿಂದಲೂ ತನ್ನ ಸದಸ್ಯ ಹಾಲು ಒಕ್ಕೂಟಗಳ ಮೂಲಕ ರಾಜ್ಯದ 26 ಲಕ್ಷಕ್ಕೂ ಹೆಚ್ಚು ಹೈನುಗಾರರಿಂದ ಹಾಲನ್ನು ಖರೀದಿಸಿ, ಸಂಸ್ಕರಿಸಿ, ನಂದಿನಿ ಬ್ರಾಂಡಿನಲ್ಲಿ ನಾನಾ ಉತ್ಪನ್ನಗಳ ಮೂಲಕ ಮಾರಾಟ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.