ಹಾಲಿನ ದರ ಏರಿಕೆ: 50 ಪೈಸೆ ಚಿಲ್ಲರೆ ಸಮಸ್ಯೆ ಸರಿದೂಗಿಸಲು 10 ಎಂಎಲ್ ಹಾಲು ಹೆಚ್ಚಳ ನೀಡಲು ನಿರ್ಧಾರ, ಯಾವುದರ ಬೆಲೆ ಎಷ್ಟು?

milk
Published on

ಬೆಂಗಳೂರು: ಹಾಲಿನ ದರ ಏರಿಕೆ ವಿಚಾರ ಸಂಬಂಧ ಮಾತನಾಡಿರುವ ಕೆಎಂಎಫ್ ಎಂಡಿ ಜಗದೀಶ್, ಸರ್ಕಾರದ ಅನುಮತಿ ಪಡೆದು ದರ ಹೆಚ್ಚಳ ಮಾಡಿದ್ದೇವೆ. ಒಂದು ಲೀಟರ್ ಹಾಲಿಗೆ 3 ರೂ ಹೆಚ್ಚಾಗಲಿದ್ದು, ಅರ್ಧ ಲೀಟರ್ ಹಾಲಿನಲ್ಲಿ 10 ಎಂ ಎಲ್ ಎಕ್ಸ್ಟ್ರಾ ಇರಲಿದೆ. ಚಿಲ್ಲರೆ ಸಮಸ್ಯೆ ಬಗೆಹರಿಸೋ ನಿಟ್ಟಿನಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಇನ್ಮುಂದೆ ಅರ್ಧ ಲೀಟರ್ ಹಾಲು 510 ಲೀಟರ್ ಇರಲಿದೆ. ಅರ್ಧ ಲೀಟರ್ ಹಾಲಿಗೆ ದರ ಏರಿಕೆ ಪ್ರಕಾರ 21.5ರೂ ಆಗಲಿದೆ. 50 ಪೈಸೆ ಚಿಲ್ಲರೆ ಸಮಸ್ಯೆ ಸರಿದೂಗಿಸಲು 10 ಎಂಎಲ್ ಹಾಲು ಹೆಚ್ಚಳ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಿರುಪತಿಗೆ ನಂದಿನಿ ತುಪ್ಪ ನೀಡುವ ವಿಚಾರವಾಗಿ ಮಾತನಾಡಿರುವ ಜಗದೀಶ್, 2021 ರಿಂದಲೇ ತಿರುಪತಿಗೆ ತುಪ್ಪ ನೀಡುವುದನ್ನ ನಿಲ್ಲಿಸಿದ್ದೇವೆ. 2021 ರಲ್ಲಿ ನಾವು ಟೆಂಡರ್ ನಲ್ಲಿ ಭಾಗಿಯಾಗಿದ್ವಿ. ಟೆಂಡರ್ ನಲ್ಲಿ ಎಲ್ 3 ಆಗಿದ್ವಿ. ಆದರೂ ಶೇಕಡ 35 ರಷ್ಟು ತುಪ್ಪ ಪೂರೈಕೆ ಮಾಡಿದ್ದೇವೆ. ಈ ಬಾರಿ ಟೆಂಡರ್ ಕರೆದರೆ ನಾವು ಭಾಗಿಯಾಗುತ್ತೇವೆ. ಗುಣಮಟ್ಟದ ತುಪ್ಪ ಆಗಿದ್ದರಿಂದ ದರ ಹೊಂದಾಣಿಕೆ ಸಾಧ್ಯವಿಲ್ಲ. ಗುಣಮಟ್ಟದ ತುಪ್ಪ ನೀಡಲು ಕೆಎಂಎಫ್ ಸಿದ್ದವಿದೆ ಎಂದರು.

ಯಾವುದರ ಬೆಲೆ ಎಷ್ಟಿರಲಿದೆ?
ಬ್ಲೂ ಹಾಲು-39 ರಿಂದ 42
ಬ್ಲೂ(ಟೋನ್ಡ್)-40 ರಿಂದ 43
ಗ್ರೀನ್-44 ರಿಂದ 47
ಆರೆಂಜ್-45 ರಿಂದ 48
ಮೊಸರು (ಕೆಜಿ)-47 ರಿಂದ 50
ಮೊಸರು(ಅರ್ಧ ಕೆಜಿ)-24 ರಿಂದ 26
ಒಂದು ಕೆ.ಜಿ ಮೊಸರಿಗೆ-47 ರೂ ನಿಂದ 50 ರೂಗೆ ಏರಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net