

ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಶೀಘ್ರವೇ ಹಾಲು ಸಂಗ್ರಹ 1 ಕೋಟಿ ಲೀಟರ್ ಹೆಚ್ಚಳ ಮಾಡಲಾಗುವುದು. ವಿದೇಶಗಳಲ್ಲಿ ನಂದಿನಿ ಉತ್ಪನ್ನ ಮಳಿಗೆ ತೆರೆದು ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಲಾಗುವುದು ಎಂದು ಕೆಎಂಎ್ ಅಧ್ಯಕ್ಷ ಭೀಮಾನಾಯ್ಕ ಹೇಳಿದ್ದಾರೆ.
ವಿಜಯವಾಣಿ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ವರ್ಷ 85.25 ಲಕ್ಷ ಲೀಟರ್ ಇದ್ದ ಹಾಲು ಉತ್ಪಾದನೆ ಈಗ 94.26 ಲಕ್ಷ ಲೀಟರ್‌ಗೆ ಎರಿಕೆ ಆಗಿದೆ. ಸದ್ಯದಲ್ಲಿಯೇ ಕೆಎಂಎ್ ಹಾಲು ಸಂಗ್ರಹ 1 ಕೋಟಿ ಲೀಟರ್ ದಾಟಲಿದೆ ಎಂದು ಹೇಳಿದರು.
ನಂದಿನಿ ಬ್ರಾಂಡ್ ಉತ್ಪನ್ನಗಳನ್ನು ದೇಶ ವಿದೇಶದಲ್ಲಿ ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ದುಬೈನಲ್ಲಿ ಮಳಿಗೆ ತೆರೆಯಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೌದಿ, ಅಮೇರಿಕಾ ಸೇರಿದಂತೆ ಇನ್ನು ಹಲವು ಕಡೆ ಮಳಿಗೆಗಳನ್ನು ತೆರೆಯಲು ಕ್ರಮ ವಹಿಸಲಾಗಿದೆ ಎಂದರು.
ಎಲ್ಲೆಡೆ ನಂದಿನಿ ಉತ್ಪನ್ನ ಘಮ
ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿಯೂ ನಂದಿನಿ ಉತ್ಪನ್ನಗಳು ಲಭ್ಯವಿರುವಂತೆ ಮಾಡಲು ಯೋಜಿಸಲಾಗಿದೆ. ಈಗಾಗಲೇ ಅಯೋಧ್ಯೆ ಸೇರಿದಂತೆ ಹಲವು ಕಡೆ ಮಳಿಗೆಗಳನ್ನು ತೆರೆಯಲಾಗಿದೆ. ಕಾಶಿ, ಶಿರಡಿ, ಪುರಿಯಲ್ಲಿಯೂ ನಂದಿನಿ ಮಳಿಗೆಗಳನ್ನು ಪ್ರಾರಂಭಿಸಲಾಗುವುದು. ಅಲ್ಲದೆ, ವಿಮಾನ ನಿಲ್ದಾಣ, ರೈಲ್ವೆ, ಮೆಟ್ರೋ ಮತ್ತು ಬಸ್ ನಿಲ್ಡಾಣಗಳಲ್ಲಿಯೂ ನಂದಿನಿ ಉತ್ಪನ್ನ ಲಭ್ಯವಿರುವಂತೆ ಮಾಡಲಾಗುವುದು ಎಂದು ಹೇಳಿದರು.
ಹೊಸ ಉತ್ಪನ್ನಗಳಿಗೆ ಕ್ರಮ
ಕೆಎಂಎ್ ಸಂಗ್ರಹಿಸುವ ಹಾಲಿನಲ್ಲಿ 51 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಇನ್ನುಳಿದ ಹಾಲನ್ನು ನಾನಾ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತಿದೆ. ಹೊಸದಾಗಿ ನಾನಾ ್ಲೇವರ್ ಐಸ್ ಕ್ರೀಂ ಮಾಡಲು ಪ್ರಾರಂಭಿಸಿದ್ದರಿಂದ ಬಾರಿ ಬೇಡಿಕೆ ಬಂತು. 19 ಸಾವಿರ ಲೀಟರ್ ಇದ್ದ ಬೇಡಿಕೆ 39 ಸಾವಿರ ಲೀಟರ್‌ಗೆ ಏರಿಕೆ ಆಗಿದೆ. ಇದೇ ರೀತಿ ನಾನಾ ಬಗೆಯ ಸ್ವೀಟ್ ಕೂಡ ಮಾಡಲಾಗಿದ್ದು, ಈ ಬಾರಿ ದಸರಾದಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ ಎಂದರು.
ಕರ್ನಾಟಕ ಪಾಕ್
ನಂದಿನಿ ಬ್ರಾಂಡ್‌ನಲ್ಲಿ ನಾನಾ ್ಲೇವರಿಂಗ್ ಸ್ವೀಟ್ ಮಾಡಲಾಗುತ್ತಿದೆ. ರಾಜ್ಯೋತ್ಸವ ಅಂಗವಾಗಿ ಮೈಸೂರು ಪಾಕ್ ರೀತಿಯಲ್ಲಿಯೇ ಕರ್ನಾಟಕ ಪಾಕ್ ಮಾಡಲು ಉದ್ದೇಶಿಸಲಾಗಿದೆ ಎಂದರು.
ಸೈಲೇಜ್‌ಗೆ ಪ್ರೋತ್ಸಾಹ
ಮೆಕ್ಕೆಜೋಳ ಬಳಕೆ ಮಾಡಿ ಮಾಡುವ ಪಶು ಆಹಾರವಾದ ಸೈಲೇಜ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಸೈಲೇಜ್ ಬಳಕೆಯಿಂದ ಹಸುಗಳಲ್ಲಿ ಹಾಲಿನ ಇಳುವರಿ ಗಣನೀಯವಾಗಿ ಹೆಚ್ಚಳವಾಗಿದೆ. ರಾಜ್ಯದಲ್ಲಿ 15000 ಮೆಟ್ರಿಕ್ ಟನ್ ಸೈಲೇಜ್‌ಗೆ ಬೇಡಿಕೆ ಇದ್ದು ಸದ್ಯ 6500 ಟನ್ ಪೂರೈಕೆಯಾಗುತ್ತಿದೆ. ರಾಜ್ಯದಲ್ಲಿ ಐದಾರು ಕಡೆ 3 ಕೋಟಿ ವೆಚ್ಚದಲ್ಲಿ ಸೈಲೇಜ್ ಗೋಡನ್ ಮಾಡಲು ನಿರ್ಧರಿಸಲಾಗಿದೆ. ಸೈಲೇಜ್ ಮಾಡುವುದು ಹೇಗೆ ಎನ್ನುವ ಬಗ್ಗೆಯೂ ತರಬೇತಿ ನೀಡಲಾಗುವುದು. ಇದರಿಂದ ರೈತರಿಗೂ ಪ್ರೋತ್ಸಾಹ ಸಿಗಲಿದ್ದು, ಅವರಿಗೆ ಆದಾಯವೂ ಬರಲಿದೆ. ಹಾಲಿನ ಉತ್ಪಾದನೆಯೂ ಹೆಚ್ಚಳವಾಗಲಿದೆ ಎಂದರು.
ನಂದಿನಿ ಬೂತ್‌ನಲ್ಲಿ ದೋಸೆ ಹಿಟ್ಟು
ಹಾಲಿ, ಮೊಸರು ಸೇರಿದಂತೆ ನಂದಿನಿ ಉತ್ಪನ್ನಗಳನ್ನು ಕೊಳ್ಳಲು ಗ್ರಾಹಕರು ನಂದಿನಿ ಮಳಿಗೆಗಳಿಗೆ ಸಹಜವಾಗಿಯೇ ಬರುತ್ತಾರೆ. ಆದ್ದರಿಂದ ಅಲ್ಲಿಯೇ ನಂದಿನಿ ಬ್ರಾಂಡ್‌ನ ದೋಸೆ ಹಿಟ್ಟು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಹಾವೇರಿ, ಬೀದರ್‌ನಲ್ಲಿ ಸಾವಿರ ಹಸು
ಹೈನೋದ್ಯಮವನ್ನು ಪ್ರೋತ್ಸಾಹ ಮಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಹಾವೇರಿ ಮತ್ತು ಬೀದರ್ ಜಿಲ್ಲೆಯಲ್ಲಿ ಹಾಲು ಉತ್ಪಾದಕರನ್ನು ಗುರುತಿಸಿ, ತಲಾ 1 ಸಾವಿರ ಹಸುಗಳನ್ನು ಕೊಡುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದರು.