

ರಾಣೆಬೆನ್ನೂರ: ವಿದ್ಯಾಥಿರ್ಗಳು ಶಾಲಾ&ಕಾಲೇಜ್ ಹಂತದಲ್ಲಿ ನಡೆಯುವ ಎನ್ಎಸ್ಎಸ್ ಶಿಬಿರದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಾಮಾನ್ಯಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ನಾಗಪ್ಪ ಗುಡಿಯವರ ಹೇಳಿದರು.
ಸ್ಥಳಿಯ ಕೆ.ಎಲ್.ಇ. ಸಂಸ್ಥೆಯ ರಾಜ&ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಎನ್ಎಸ್ಎಸ್ ಟಕದ ವತಿಯಿಂದ ತಾಲೂಕಿನ ಮಾಗೋಡ ಗ್ರಾಮದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಎನ್ಎಸ್ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಗಿರೀಶ ಮುದಿಗೌಡ್ರ, ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ, ಗ್ರಾಪಂ ಸದಸ್ಯೆ ರಾಜೇಶ್ವರಿ ಮುದಕನಗೌಡ್ರ, ಅನುರಾಧ ಎಸ್., ಎಂ.ಎನ್. ಸೂರಣಗಿ, ನಾಗರಾಜ ಗವಿಯಪ್ಪನವರ, ಸಾಯಿಲತಾ ಮಡಿವಾಳರ, ವೀರೇಶ ಕುರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾಶ್ರೀ ದಾಮೋದರ ಪ್ರಾಥಿರ್ಸಿದರು. ಸುಜಾತ ಹುಲ್ಲೂರ ಸ್ವಾಗತಿಸಿದರು. ಕೃಷ್ಣ ಎಲ್.ಎಚ್. ನಿರೂಪಿಸಿದರು. ಡಾ. ಕವಿತಾ ಗಡ್ಡದಗೂಳಿ ವಂದಿಸಿದರು.