

ರಾಣೆಬೆನ್ನೂರ: ವಿದ್ಯಾಥಿರ್ಗಳು ಉತ್ತಮ ಸಂವಹನ ಕೌಶಲ ಹೊಂದಿದರೆ ಸಮಾಜದಲ್ಲಿ ಉತ್ತಮ ಹುದ್ದೆ ಹೊಂದಿ ಉನ್ನತ ಸ್ಥಾನಕ್ಕೇರಲು ಅನುಕೂಲ ಆಗುತ್ತದೆ ಎಂದು ಸಹಾಯಕ ಪ್ರಾಧ್ಯಾಪಕ ಪಿ.ಐ. ಸಿದ್ದನಗೌಡರ ಹೇಳಿದರು.
ಸ್ಥಳಿಯ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಶಿಕ್ಷಣಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಮಾನವ ಸಂವಹನ ಕೌಶಲಗಳು ಎಂಬ ವಿಷಯ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ, ಸ್ವಾಮಿ ವಿವೇಕಾನಂದರ, ರವೀಂದ್ರನಾಥ ಟ್ಯಾಗೋರರ ವ್ಯಕ್ತಿತ್ವದ ಬಗ್ಗೆ ನಿರೂಪಿಸುವುದರ ಜತೆಗೆ ಸಂವಹನ ಕೌಶಲಗಳು ವಿದ್ಯಾಥಿರ್ಗಳಲ್ಲಿ ಉತ್ತಮ ಭಾಷಾ ಕೌಶಲಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ನಾಗರಾಜ ಗವಿಯಪ್ಪನವರ, ಪೂಜಾ ಕಾಟಿ, ಸಹನಾ ಹರವಿಶೆಟ್ಟರ, ರಂಜಿತ ಕರಿಯಣ್ಣನವರ, ಸೌಜನ್ಯ ಬಿ.ಎ., ಎಂ.ಎನ್. ಸೂರಣಗಿ, ರೇಖಾ ಶಿಡೇನೂರ, ಸಾಯಿಲತಾ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.