ಕ್ರೀಡಾಕೂಟದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಿ; ಡಾ. ಮನೋಜ

21-RNR-04
Published on

ರಾಣೆಬೆನ್ನೂರ: ವಿದ್ಯಾಥಿರ್ಗಳು ದೈಹಿಕ ಹಾಗೂ ಮಾಸಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಸಹಕಾರಿಯಾಗಿವೆ. ಆದ್ದರಿಂದ ಪ್ರತಿಯೊಬ್ಬರೂ ಕಾಲೇಜ್​ ಹಂತದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಮುಂಡರಗಿ ಕೆ.ಆರ್​. ಬೆಲ್ಲದ ಅರ್ಥಶಾಸ್ತ್ರ ಸ್ನಾತಕೋತ್ತರ ಕೇಂದ್ರದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಮನೋಜ ಕೋಪರ್ಡೆ ಹೇಳಿದರು.
ನಗರದ ಕೆ.ಎಲ್​.ಇ. ಸಂಸ್ಥೆಯ ರಾಜ&ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ವಾಷಿರ್ಕ ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಶಿಸ್ತನ್ನು ರೂಡಿಸಿಕೊಂಡರೆ ಮಾತ್ರ ಸಾಧನೆಯ ಉತ್ತುಂಗಕ್ಕೇರಲು ಸಾಧ್ಯ. ಗೆಲ್ಲಲು ಆಡಬೇಡಿ ನಿಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿ ಆಟವಾಡಬೇಕು ಎಂದರು.
ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್​ ವಿ .ಪಿ. ಲಿಂಗನಗೌಡ್ರ ಅಧ್ಯತೆ ವಹಿಸಿದ್ದರು.
ಸದಸ್ಯರಾದ ಬಿ.ಎಸ್​. ಪಟ್ಟಣಶಟ್ಟಿ, ಜಯಣ್ಣ ಜಂಬಗಿ, ನಾರಾಯಣ ನಾಯಕ, ಮಂಜಪ್ಪ ಸಣ್ಣಬಸಪ್ಪನವರ, ಸಂಗೀತಾ ಕಾಯಕದ, ಭಾಗ್ಯವತಿ ದೇಶಪಾಂಡೆ, ಶ್ರೇಯಾ ಬಣ್ಣದ, ಪೂಜಾ ಪಾಟೀಲ, ಸಾಯಿಲತಾ ಮಡಿವಾಳರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net