

ರಾಣೆಬೆನ್ನೂರ: ವಿದ್ಯಾರ್ಥಿನಿಯರು ಗುಣಾತ್ಮಕ ಶಿಕ್ಷಣ ಪಡೆದು ಎಲ್ಲ ರಂಗದಲ್ಲೂ ಉನ್ನತ ಸಾಧನೆಗೈದು ಸಮಾಜದಲ್ಲಿ ಒಳ್ಳೆಯ ಸ್ಥಾನ ಪಡೆದುಕೊಳ್ಳಬೇಕು ಎಂದು ಕೆಎಲ್‌ಇ ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ ಹೇಳಿದರು.
ಕೆಎಲ್‌ಇ ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣು ಮಕ್ಕಳ ಸಂಯುಕ್ತ ಪದವಿ-ಪೂರ್ವ ಕಾಲೇಜ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ 2023-24ನೇ ಸಾಲಿನ ಕಾಲೇಜ್ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಎಲ್ಲ ಶೈಕ್ಷಣಿಕ ಹಾಗೂ ಉದ್ಯೋಗಿಕ ಕ್ಷೇತ್ರದಲ್ಲಿ ಬಹಳ ಸ್ಪರ್ಧೆಯಿದೆ. ಆದ್ದರಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿ ಅಧ್ಯಯನ ಮಾಡಬೇಕು ಎಂದರು.
ಪ್ರಾಚಾರ್ಯ ಎಫ್.ಎನ್. ಗುಡಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ಮಂಡಳಿ ಸದಸ್ಯರಾದ ಬಿ.ಎಸ್. ಪಟ್ಟಣಶೆಟ್ಟಿ , ವೀರಣ್ಣ ಅಂಗಡಿ, ಸಂಜೀವಿನಿ ಪದವಿ ಪೂರ್ವ ಕಾಲೇಜ್‌ನ ಪ್ರಾಚಾರ್ಯ ಪ್ರಭು ಕೊಡದ, ಡಾ. ಚಂದ್ರಕಾಂತ ಆರ್.ಬಿ., ಪ್ರೇಮಕುಮಾರ, ಸಂಗೀತಾ ಕುಲಕರ್ಣಿ, ಆರ್.ಜಿ. ಕುರವತ್ತಿ, ಶರಣಪ್ಪ ಆರ್.ಜಿ., ಉಮೇಶ ಗುಂಡಗಟ್ಟಿ, ಇಂದಿರಾ ಉಪ್ಪುಣಸಿ ಮತ್ತಿತರರು ಉಪಸ್ಥಿತರಿದ್ದರು.