ಪರಿಸರ ಮಾಲಿನ್ಯ ತಡೆಯುವುದು ತುಂಬ ಮುಖ್ಯ; ನಾಗರಾಜ

19-RNR-03
Published on

ರಾಣೆಬೆನ್ನೂರ: ಪರಿಸರದಲ್ಲಿ ಸಿಎಫ್​ಸಿ ಅನಿಲದಿಂದ ಆಗುವ ಹಸಿರು ಮನೆಯ ಪರಿಣಾಮದಿಂದ ಓಝೊನ್​ ಪದರು ನಾಶವಾಗುತ್ತದೆ. ಹೀಗೆಯೆ ಮುಂದುವರಿದರೆ ಜೀವ ಸಂಕುಲ ನಾಶವಾಗುತ್ತದೆ. ಆದ್ದರಿಂದ ಪರಿಸರ ಮಾಲಿನ್ಯ ತಡೆದು ಪರಿಸರವನ್ನು ಕಾಪಾಡುವುದರ ಜತೆಗೆ ಓಝೊನ್​ ಪದರನ್ನು ಕಾಪಾಡಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ಉಪನ್ಯಾಸಕ ನಾಗರಾಜ ಗವಿಯಪ್ಪನವರ ಹೇಳಿದರು.
ಸ್ಥಳಿಯ ಕೆಎಲ್​ಇ ಸಂಸ್ಥೆಯ ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಓಝೊನ್​ ದಿನ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾಲಯದ ಪ್ರಾಚಾರ್ಯ ನಾರಾಯಣ ನಾಯಕ ಮಾತನಾಡಿ, ವಾಯುಮಾಲಿನ್ಯ ತಡೆಗಟ್ಟುವಿಕೆ ಮತ್ತು ಉತ್ತಮ ಪರಿಸರವನ್ನು ರೂಪಿಸುವುದು ನಮ್ಮೆಲ್ಲರ ಆದ್ಯಕರ್ತವ್ಯವಾಗಿದೆ. ಹಾಗೂ ಪ್ರತಿಯೊಬ್ಬರು ಸಸ್ಯಗಳನ್ನು ಬೆಳೆಸಿ ಓಝೊನ್​ ಪದರನ್ನು ರಕ್ಷಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ವಿದ್ಯಾಥಿರ್ ಒಕ್ಕೂಟದ ಕಾರ್ಯಾಧ್ಯಕ್ಷ ರೇಖಾ ಶಿಡೇನೂರ, ಎಂ.ಎನ್​. ಸೂರಣಗಿ, ಚನ್ನಬಸಪ್ಪ ಮಾಳಿ, ಕೃಷ್ಣ ಎಲ್​.ಎಚ್​. ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net