

ಮೀರತ್: ಪ್ರೀತಿ ಹುಟ್ಟಿದಾಗ ಗಾಳಿಯಲ್ಲಿ ತೇಲಾಡಿದಂತೆ ಆಗುತ್ತದೆ ಎಂಬ ವಾಕ್ಯವನ್ನು ನಾವು ಕೇಳಿದ್ದೇವೆ. ಅದಕ್ಕೆ ಪೂರಕವೆಂಬಂತೆ ಪ್ರೇಮಿಗಳು ಕೈ ಕೈ ಹಿಡಿದು ರಸ್ತೆಗಳಲ್ಲಿ ಸುತ್ತಾಡುತ್ತ ಉದ್ಯಾನವನಗಳಲ್ಲಿ ಕಾಲ ಕೆಳಯುವುದನ್ನು ನಾವು ನೋಡಿದ್ದೇವೆ. ಆದರೆ ಕೆಲವೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ವರ್ತನೆ ಜನರಿಗೆ ಮುಜುಗರವನ್ನುಂಟು ಮಾಡಿರುವ ಹಲವು ನಿದರ್ಶನಗಳು ನಮ್ಮ ಮುಂದಿವೆ. ಇದೀಗ ಅದೇ ರೀತಿಯ ಘಟನೆಯೊಂದು ಉತ್ತರಪ್ರದೇಶದ ಮೀರತ್ನಲ್ಲಿ ನಡೆಯುತ್ತಿರುವ ನೌಚಂಡಿ ಮೇಳದಲ್ಲಿ ನಡೆದಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಮೀರತ್ನಲ್ಲಿ ನಡೆಯುತ್ತಿರುವ ನೌಚಂಡಿ ಮೇಳದಲ್ಲಿ ಯುವ ಪ್ರೇಮಿಗಳಿಬ್ಬರು ಜನ ಜಂಗುಳಿಯ ನಡುವೆಯೇ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ಈ ಅತಿರೇಕದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ, ನೌಚಂಡಿ ಮೇಳದಲ್ಲಿ ಈ ಜೋಡಿಗೆ Truth Or Dare ಆಟದ ಭಾಗವಾಗಿ ಕಿಸ್ಸಿಂಗ್ ಚಾಲೆಂಜ್ ನೀಡಿದ್ದಾರೆ. ಸವಾಲಿನ ಭಾಗವಾಗಿ ಜೋಡಿಯು ಬಹಿರಂಗವಾಗಿ ಚುಂಬಿಸುವ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ. ಇಲ್ಲೊಬ್ಬ ವ್ಯಕ್ತಿ ವಿಡಿಯೋ ಮಾಡದಂತೆ ಜನರಿಗೆ ಸೂಚಿಸುತ್ತಿರುವುದನ್ನು ನೋಡಬಹುದಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದಲ್ಲದೆ ಈ ರೀತಿಯ ಆಟವಾಡಿಸಿದವರನ್ನು ಕೂಡ ಜೋಡಿಯ ಜೊತೆ ಬಂಧಿಸಿ ವಿಚಾರಣೆಗೆ ಒಳಪಡಿಸಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಒಂದು ಆಟಕ್ಕಾಗಿ ಜೋಡಿ ಈ ರೀತಿ ಅಸಭ್ಯವಾಗಿ ವರ್ತಿಸಿರುವುದಕ್ಕೆ ವ್ಯಾಒಕ ಖಂಡನೆ ವ್ಯಕ್ತವಾಗುತ್ತಿದೆ.