

ಬೆಂಗಳೂರು: ಕಿಯೋನಿಕ್ಸ್‌ನಲ್ಲಿ ನಡೆದಿರುವ ಹಗರಣ ಕುರಿತು ಎರಡು ದಿನದಲ್ಲಿ ಇನ್ನಷ್ಟು ಮಾಹಿತಿ ನೀಡುವಂತೆ(The Kionics scandal; CM instructed to give further information)ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಕಿಯೋನಿಕ್ಸ್ ಸಂಸ್ಥೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿ ಈ ಸೂಚನೆ ನೀಡಿದರು.
ಕಿಯೋನಿಕ್ಸ್ ವೆಂಡರ್ಸ್ ಬೇಡಿಕೆಗಳು, ಸಮಸ್ಯೆಗಳು ಹಾಗೂ ಹಗರಣ ಕುರಿತು ಇದುವರೆಗಿನ ತನಿಖೆಯ ಪ್ರಗತಿ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಹಗರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಅವಶ್ಯಕತೆ ಇದ್ದು, ಎರಡು ದಿನದಲ್ಲಿ ಒದಗಿಸುವಂತೆ ತನಿಖೆಯ ನೇತೃತ್ವ ವಹಿಸಿರುವ ಹಿರಿಯ ಐಎಎಸ್ ಅಧಿಕಾರಿ ಮಹೇಶ್ವರರಾವ್ ಅವರಿಗೆ ಸೂಚಿಸಿದರು.
ವರದಿ ಪರಿಶೀಲಿಸಿದ ಬಳಿಕ ಭಾನುವಾರ ಮತ್ತೊಂದು ಸಭೆ ನಡೆಸಿ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ತೀರ್ಮಾನಿಸೋಣ. ಹಗರಣದಲ್ಲಿ ಕಿಯೋನಿಕ್ಸ್, ವೆಂಡಸ್ ಹಾಗೂ ಬಳಕೆದಾರ ಇಲಾಖೆಗಳ ಪಾತ್ರಗಳೇನು? ಏನಾಗಿದೆ ಎಂಬ ಬಗ್ಗೆ ಬೆಳಕು ಚೆಲ್ಲುವಂತೆ ನಿರ್ದೇಶನ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಕಿಯೋನಿಕ್ಸ್ ವೆಂಡರ್ಸ್ ನಡೆಸಿದ ಪ್ರತಿಭಟನೆ, ಅವರ ಬೇಡಿಕೆಗಳು, ಅವುಗಳ ಪರಿಹಾರಕ್ಕಿರುವ ಮಾರ್ಗೋಪಾಯಗಳ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಕಿಯೋನಿಕ್ಸ್‌ನಲ್ಲಿ ಆಗಿರುವ ಹಗರಣಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದರು.