ಬ್ರಿಟನ್ ರಾಜ ಮೂರನೇ ಚಾರ್ಲ್ಸ್​ಗೆ ಕ್ಯಾನ್ಸರ್ ಪತ್ತೆ

King Charles
Published on

ಲಂಡನ್: ಬ್ರಿಟನ್ ರಾಜ 3ನೇ ಚಾರ್ಲ್ಸ್​ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಆರಂಭಿಸಲಾಗಿದೆ ಎಂದು ಬಕಿಂಗ್​ಹ್ಯಾಮ್ ಅರಮನೆ ಸೋಮವಾರ ತಿಳಿಸಿದೆ. ಲಂಡನ್​ನಲ್ಲಿರುವ ಬಕಿಂಗ್​ಹ್ಯಾಮ್ ಅರಮನೆಯು ಬ್ರಿಟಿಷ್ ರಾಜಮನೆತನದ ಅಧಿಕೃತ ನಿವಾಸವಾಗಿದೆ.

ಇತ್ತೀಚೆಗೆ ಚಾರ್ಲ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗ ಅವರ ದೇಹದಲ್ಲಿ ಯಾವುದೋ ಕಾಯಿಲೆಯ ಲಕ್ಷಣಗಳು ಪತ್ತೆಯಾಗಿವೆ. ಅರಮನೆಯು ಈ ರೋಗಲಕ್ಷಣಗಳನ್ನು ಒಂದು ರೀತಿಯ ಕ್ಯಾನ್ಸರ್ ಎಂದು ದೃಢಪಡಿಸಿದೆ. ಆದರೆ ಇದು ಯಾವ ಕ್ಯಾನ್ಸರ್ ಎಂದು ಹೇಳಿಕೆಯಲ್ಲಿ ಬಹಿರಂಗಪಡಿಸಿಲ್ಲ. ಸೋಮವಾರದಿಂದ ಅವರಿಗೆ ನಿಯಮಿತ ಚಿಕಿತ್ಸೆ ಪ್ರಾರಂಭಿಸಲಾಗಿದ್ದು, ಅವರ ಎಲ್ಲ ಸಾರ್ವಜನಿಕ ಸಭೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ.

ಕಿಂಗ್ 3ನೇ ಚಾರ್ಲ್ಸ್ ಅವರು ಚಿಕಿತ್ಸೆಯ ಬಗ್ಗೆ ತುಂಬಾ ಸಕಾರಾತ್ಮಕವಾಗಿದ್ದಾರೆ. ಅವರು ಸಾಧ್ಯವಾದಷ್ಟು ಬೇಗ ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಹಿಂತಿರುಗುತ್ತಾರೆ. ವೈದ್ಯರ ಸಲಹೆಯ ಮೇರೆಗೆ ಅವರು ಸಾರ್ವಜನಿಕ ಕರ್ತವ್ಯ ನಿರ್ವಹಿಸುತ್ತಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net