

ಯಳಂದೂರು: ತಾಲೂಕಿನ ಕಿನಕಹಳ್ಳಿ ಗ್ರಾಮದ ಎಸ್.ರಾಚಯ್ಯ ಎಂಬುವರ ಪುತ್ರಿ ಆರ್.ಸಾಧನಾ 513 ಅಂಕಗಳನ್ನು ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಕೊಳ್ಳೇಗಾಲದ ವಿಶ್ವಚೇತನ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಇವರು ಕಲಾ ವಿಭಾಗದಲ್ಲಿ ಈ ಸಾಧನೆ ಮಾಡಿದ್ದು ಇವರ ಸಾಧನೆಗೆ ಗ್ರಾಮಸ್ಥರು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಅಭಿನಂದ ಸಲ್ಲಿಸಿದ್ದಾರೆ.