ನನಗೆ ಅಂಬಾನಿ ಕುಟುಂಬದ ಪರಿಚಯವಿರಲಿಲ್ಲ; ಅನಂತ್​ ಅಂಬಾನಿ ವಿವಾಹದಲ್ಲಿ ಭಾಗಿಯಾಗಿದ್ದ ಕಿಮ್ ಕಾರ್ಡಶಿಯಾನ್ ಹೀಗೇಳಿದ್ದೇಕೆ? | Kim Kardashian

Untitled design - 2025-03-14T180327.949
Published on

ಮುಂಬೈ: ಮುಕೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ 2024ರಲ್ಲಿ ನೆರವೇರಿತು. ಈ ವಿವಾಹ ಮಹೋತ್ಸವದಲ್ಲಿ ಹಾಲಿವುಡ್ ತಾರೆ ಕಿಮ್ ಕಾರ್ಡಶಿಯಾನ್(Kim Kardashian) ಮತ್ತು ಕ್ಲೋಯ್ ಕಾರ್ಡಶಿಯಾನ್ ಭಾಗವಹಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಕಿಮ್ ಕಾರ್ಡಶಿಯಾನ್ ಅವರು ಅಂಬಾನಿ ಕುಟುಂಬವನ್ನು ತಿಳಿದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಅಲ್ಲದೆ ಕಿಮ್ ಕಾರ್ಡಶಿಯಾನ್ ಅವರು ನೀತಾ ಅಂಬಾನಿ ಅವರನ್ನು ಕಾರ್ಯಕ್ರಮದಲ್ಲಿ ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಅನಂತ್ ಅಂಬಾನಿಯ ತಾಯಿ ನೀತಾ ಅವರನ್ನು ತನ್ನ ಸ್ವಂತ ತಾಯಿಗೆ ಹೋಲಿಸಿದರು. ನೀತಾ ಅಂಬಾನಿ ಕುಟುಂಬದ 'ಕ್ರಿಸ್ ಜೆನ್ನರ್' ಎಂದು ಕಿಮ್ ಹೇಳಿದರು.

ಆ (ಅಂಬಾನಿ) ಕುಟುಂಬವು ಮದುವೆಗೆ ಮೊದಲು ತಮ್ಮ ಜನರಿಗೆ ಎಷ್ಟು ಸಹಾಯ ಮಾಡುತ್ತದೆ ಎಂಬುದನ್ನು ನಾನು ಹೇಳಲು ಬಯಸುತ್ತೇನೆ. ಅವರು ಪ್ರತಿದಿನ ಬೇರೆ ಬೇರೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದರು. ಒಂದು ದಿನ ಅವರು 5 ಸಾವಿರ ಜನರಿಗೆ ವರ್ಷದ ಪಡಿತರವನ್ನು ಪಾವತಿಸಿದರು. ಮರುದಿನ ಅವರು 2,500 ಜನರ ಮದುವೆಗೆ ಹಣ ನೀಡಿದರು. ಅವರ ಮದುವೆ ನಿಜಕ್ಕೂ ಅದ್ದೂರಿಯಾಗಿತ್ತು. ಅವರು ಇತರರಿಗೆ ನಿಜವಾಗಿಯೂ ಉತ್ತಮ ರೀತಿಯಲ್ಲಿ ಹಿಂತಿರುಗಿಸುತ್ತಿದ್ದಾರೆ ಎಂದು ತಿಳಿಸಿದರು.

ನಂತರ ಕಿಮ್ ಕಾರ್ಡಶಿಯಾನ್ ನೀತಾ ಅಂಬಾನಿಗೆ ಧನ್ಯವಾದ ಹೇಳಿ, 'ನೀತಾ ಅಂಬಾನಿ, ವರನ ತಾಯಿ... ಅವರು ಅಂಬಾನಿ ಕುಟುಂಬದ ಕ್ರಿಸ್ ಜೆನ್ನರ್. ನನ್ನ ಜೀವನದಲ್ಲಿ ನಾನು ಭೇಟಿಯಾದ ಎಲ್ಲಾ ಜನರಲ್ಲಿ ಅವರು ಅತ್ಯಂತ ಮೃದುವಾದ ಕೈಗಳನ್ನು ಹೊಂದಿದ್ದರು. ಅಂಬಾನಿ ಕುಟುಂಬ ನನಗೆ ತಿಳಿದಿಲ್ಲ. ನನ್ನ ಕೆಲವು ಸ್ನೇಹಿತರಿಗೆ ಅವರ ಕುರಿತು ತಿಳಿದಿದೆ. ತನ್ನ ಸ್ನೇಹಿತೆ ಮತ್ತು ಆಭರಣ ವ್ಯಾಪಾರಿ ಲೊರೆನ್ ಶ್ವಾರ್ಟ್ಜ್ ಅಂಬಾನಿ ಕುಟುಂಬಕ್ಕಾಗಿ ಆಭರಣಗಳನ್ನು ವಿನ್ಯಾಸಗೊಳಿಸುತ್ತಾರೆ ಎಂದು ಹೇಳಿದರು. ಅಂಬಾನಿ ಕುಟುಂಬವು ಕಿಮ್ ಕಾರ್ಡಶಿಯಾನ್ ಅವರನ್ನು ಮದುವೆಗೆ ಆಹ್ವಾನಿಸಲು ಬಯಸುವುದಾಗಿ ಲೊರೆನ್ ಅವರಿಗೆ ತಿಳಿಸಿದರು. ಬಳಿಕ 22 ಕೆಜಿ ತೂಕದ ಮದುವೆ ಕಾರ್ಡ್ ಸಿಕ್ಕಿತು. ಬಳಿಕ ನಾನು ಆ ವಿವಾಹದಲ್ಲಿ ಭಾಗಿಯಾಗಿದ್ದೆ ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net