ನಿಸರ್ಗದಿಂದ ಮಹಾರಾಷ್ಟ್ರದಲ್ಲಿ ನೆಲಕ್ಕುರುಳಿದ ನೂರಾರು ಮರಗಳು: ವಿದ್ಯುತ್​ ಕಂಬ ಬಿದ್ದು ವೃದ್ಧ ಬಲಿ

nisrga cylone
Published on

ಮುಂಬೈ: ನಿಸರ್ಗ ಚಂಡಮಾರುತ ಮಾಹಾರಾಷ್ಟ್ರದಲ್ಲಿ ಮೊದಲ ಬಲಿ ಪಡೆದಿದೆ. ತೀವ್ರವಾದ ಮಳೆ ಹಾಗೂ ಗಾಳಿಗೆ ವಿದ್ಯುತ್​ ಕಂಬ ಉರುಳಿ 58 ವರ್ಷದ ವೃದ್ಧ ಬಲಿಯಾಗಿದ್ದಾನೆ.

ಅಲಿಬಾಗ್​ನ ಉಮ್ಟೆ ಗ್ರಾಮದಲ್ಲಿ ವಿದ್ಯುತ್​ ಕಂಬ ಉರುಳಿ ವೃದ್ಧ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ರಾಯಗಡ ಜಿಲ್ಲೆಯಲ್ಲಿ ನೂರಾರು ಮರಗಳು ನೆಲಕ್ಕೆ ಉರುಳಿವೆ. ಕೆಲವು ಮರಗಳು ವಿದ್ಯುತ್​ ಕಂಬದ ಮೇಲೆ ಬಿದ್ದಿವೆ. ಹೀಗಾಗಿ ಇಡೀ ವಿದ್ಯುತ್​ ಪೂರೈಕೆ ಸ್ಥಗಿತಗೊಂಡಿದೆ. ಅಲಿಬಾಗ್​ನಲ್ಲಿ ಭೂಕುಸಿತ ಸಂಭವಿಸಿದೆ.

ಜಿಲ್ಲೆಯಲ್ಲಿ 85ಕ್ಕೂ ಅಧಿಕ ಬೃಹತ್​ ಮರಗಳು ಮನೆಗಳ ಮೇಲೆ ಉರುಳಿವೆ. 11 ವಿದ್ಯುತ್​ ಕಂಬಳು ನೆಲಕ್ಕೆ ಉರುಳಿವೆ. ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪಡೆ ಜನರ ರಕ್ಷಣೆಗೆ ಧಾವಿಸಿದೆ. ಮರ ಹಾಗೂ ವಿದ್ಯುತ್​ ಕಂಬಗಳನ್ನು ತೆರವುಗೊಳಿಸುತ್ತಿದೆ.

ನಿಸರ್ಗ ಚಂಡ ಮಾರುತ ಅರಬ್ಬೀ ಸಮುದ್ರದಿಂದ ಮಹಾರಾಷ್ಟ್ರದತ್ತ ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net