

ಭುವನೇಶ್ವರ: ಭುವನೇಶ್ವರದಲ್ಲಿರುವ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಹಾಸ್ಟೆಲ್‌ನ ಆಹಾರದಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ. ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಸಾಕಷ್ಟು ಟೀಕೆಗಳ ನಂತರ ಕಾಲೇಜು ಪ್ರತಿಕ್ರಿಯಿಸಿದೆ.
ಎಂಜಿನಿಯರಿಂಗ್ ಪದವಿ ಪಡೆಯಲು ಪೋಷಕರು ಸುಮಾರು 17.5 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ. ಇಷ್ಟು ದೊಡ್ಡ ಮೊತ್ತದ ಹೊರತಾಗಿಯೂ ಕಾಲೇಜು ಹಾಸ್ಟೆಲ್‌ನಲ್ಲಿ ನೀಡಲಾಗುತ್ತಿರುವ ಆಹಾರದಲ್ಲಿ ಬೇಜಾವಬ್ದಾರಿ ತೋರಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಬರೆದುಕೊಂಡು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಶೇರ್ ಮಾಡಿದ್ದಾರೆ.
ಕ್ಯಾಂಟೀನ್ ಗುತ್ತಿಗೆದಾರ, ಉಸ್ತುವಾರಿ ಎಲ್ಲರ ಮೇಲೆ ಮೊಕದ್ದಮೆ ಹೂಡಬೇಕು, ತಪ್ಪಿಗೆ ಅಮಾನತುಗೊಳಿಸಬೇಕು ಎಂದು ಹಾಸ್ಟೆಲ್ ಆಹಾರದಲ್ಲಿನ ಬೇಜಾವಬ್ದಾರಿತನಕ್ಕೆ, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.
ಈ ತಪ್ಪಿಗೆ ಕಾಲೇಜು ಪ್ರತಿಕ್ರಿಯಿಸಿ, ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನದಲ್ಲಿ, ಮೆಸ್ ಪ್ರೊವೈಡರ್ ಕಂಪನಿಯಿಂದ ಒಂದು ದಿನದ ಪಾವತಿಯನ್ನು ಕಡಿತಗೊಳಿಸಲು ನಿರ್ಧರಿಸಿದೆ. ಈ ಸಮಸ್ಯೆಗೆ ಪರಿಹಾರವಾಗಿ ಮೆಸ್ ಸೇವಾ ಪೂರೈಕೆದಾರರಿಂದ ಒಂದು ದಿನದ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಪಾವತಿಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.