More

  ಪ್ರಧಾನಿ ಮೋದಿಯನ್ನು ‘ಖಿಲಾಡಿ ನಂ. 1’ ಎಂದು ಕರೆದ ನಟ ಪ್ರಕಾಶ್ ರಾಜ್

  ಬೆಂಗಳೂರು: ಕೇಂದ್ರ ಸರ್ಕಾರದ ಆಡಳಿತಾರೂಢ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ‘ಜಸ್ಟ್ ಆಸ್ಕಿಂಗ್’ ಎಂದು ಸದಾ ಏನಾದರೊಂದು ಪ್ರಶ್ನೆಗಳನ್ನು ಕೇಳುತ್ತ ಬಂದಿರುವ ನಟ ಪ್ರಕಾಶ್ ರಾಜ್ ಇದೀಗ ಮತ್ತೊಮ್ಮೆ ಮೋದಿಯನ್ನು ಉದ್ದೇಶಿಸಿ ಮಾತಾಡಿದ್ದಾರೆ.

  ವಾರಾಣಸಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅತ್ಯಾಧುನಿಕ ಕ್ರೀಡಾಂಗಣಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಶಂಕು ಸ್ಥಾಪನೆ ಕೈಗೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಖ್ಯಾತ ಕ್ರಿಕೆಟಿಗರಾದ ಕಪಿಲ್ ದೇವ್, ಸುನೀಲ್ ಗವಾಸ್ಕರ್, ರವಿ ಶಾಸ್ತ್ರಿ, ಸಚಿನ್ ತೆಂಡುಲ್ಕರ್ ಮುಂತಾದವರು ಆಗಮಿಸಿದ್ದರು. ಪ್ರಧಾನಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಆಟಗಾರರ ಜತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿ ನೂತನ ಕ್ರೀಡಾಂಗಣ ಕುರಿತ ಮಾಹಿತಿ ಹಂಚಿಕೊಂಡಿದ್ದರು.

  ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿಯ ಈ ಎಕ್ಸ್ ಪೋಸ್ಟ್ ಕೋಟ್​ ರಿಪೋಸ್ಟ್ ಮಾಡಿಕೊಂಡು, ‘ಖಿಲಾಡಿ ನಂ. 1, ಎ ಡಿಫರೆಂಟ್ ಬಾಲ್​ ಗೇಮ್ ಆಲ್ ಟುಗೆದರ್’ ಎಂಬ ಕ್ಯಾಪ್ಷನ್ ಕೂಡ ಹಾಕಿದ್ದಾರೆ. ಹಿಂದೆ ಚಂದ್ರಯಾನ 3 ಸಮಯದಲ್ಲಿ, ನಂತರ ಸನಾತನ ಧರ್ಮದ ವಿಚಾರದಲ್ಲೂ ಹೀಗೆ ಪೋಸ್ಟ್ ಮಾಡಿ ಪ್ರಕಾಶ್ ರಾಜ್ ತೀವ್ರ ವಿವಾದಕ್ಕೆ ಒಳಗಾಗಿದ್ದರು.

  ಚೈತ್ರಾ ಕುಂದಾಪುರ & ಟೀಂ​ ಇಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್​ಗೆ ಎಂಟ್ರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts