More

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಎನ್​.ಎಂ. ಸುರೇಶ್ ಆಯ್ಕೆ

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಸಲುವಾಗಿ ಇಂದು ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ನಿರ್ಮಾಪಕ ಎನ್​.ಎಂ. ಸುರೇಶ್ ಆಯ್ಕೆ ಆಗಿದ್ದಾರೆ. ಈ ಮೂಲಕ ಈ ಸಲದ ಅಧ್ಯಕ್ಷ ಸ್ಥಾನ ವಿತರಕರ ವಲಯದ ಪಾಲಾಗಿದೆ.

    ಅಧ್ಯಕ್ಷ ಸ್ಥಾನಕ್ಕೆ ಎನ್‍.ಎಂ. ಸುರೇಶ್‍, ವಿ.ಹೆಚ್.ಸುರೇಶ್ (ಮಾರ್ಸ್ ಸುರೇಶ್‍), ಎ. ಗಣೇಶ್‍ ಮತ್ತು ಶಿಲ್ಪಾ ಶ್ರೀನಿವಾಸ್‍ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಒಟ್ಟು 1599 ಮತಗಳಿದ್ದು, ಆ ಪೈಕಿ 967 ಮತಗಳು ಚಲಾವಣೆಗೊಂಡಿವೆ. ನಾಲ್ವರಲ್ಲಿ ಎನ್​.ಎಂ. ಸುರೇಶ್ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ, 120 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

    ಎನ್​.ಎಂ. ಸುರೇಶ್ 337 ವೋಟುಗಳನ್ನು ಪಡೆದಿದ್ದು, ಇವರಿಗೆ ತೀವ್ರ ಪೈಪೋಟಿ ನೀಡಿದ್ದ ಶಿಲ್ಪಾ ಶ್ರೀನಿವಾಸ್ 217 ಮತಗಳನ್ನು ಗಳಿಸಿದ್ದಾರೆ. ಎ. ಗಣೇಶ್ 204, ವಿ.ಹೆಚ್.ಸುರೇಶ್ ( ಮಾರ್ಸ್ ಸುರೇಶ್) 181 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ನೂತನ ಪದಾಧಿಕಾರಿಗಳ ವಿವರ

    ಅಧ್ಯಕ್ಷ: ಎನ್​.ಎಂ. ಸುರೇಶ್

    ಉಪಾಧ್ಯಕ್ಷರು: ಪ್ರಮೀಳಾ ಜೋಷಾಯ್ -ನಿರ್ಮಾಪಕರ ವಲಯ, ಜಿ. ವೆಂಕಟೇಶ್-ವಿತರಕರ ವಲಯ, ನರಸಿಂಹುಲು -ಪ್ರದರ್ಶಕರ ವಲಯ.

    ಗೌರವ ಕಾರ್ಯದರ್ಶಿ: ಬಾ.ಮ.ಗಿರೀಶ್ -ನಿರ್ಮಾಪಕರ ವಲಯ, ಸುಬ್ರಮಣಿ ವಿ.(ಕರಿಸುಬ್ಬು)-ವಿತರಕರ ವಲಯ, ಸುಂದರ್ ರಾಜು ಆರ್.- ಪ್ರದರ್ಶಕರ ವಲಯ

    ಖಜಾಂಚಿ: ಜಯಸಿಂಹ ಮುಸರಿ

    ಚೈತ್ರಾ ಕುಂದಾಪುರ & ಟೀಂ​ ಇಂದು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್​ಗೆ ಎಂಟ್ರಿ

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts