22 ರಂದು ಕಿಗ್ಗಟ್‌ನಾಡ್ ವೇದಿಕೆ ಮಹಾಸಭೆ

Published on

ಗೋಣಿಕೊಪ್ಪಲು: ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆ ಮಹಾಸಭೆಯನ್ನು ಸೆ.22 ರಂದು ಪೊನ್ನಂಪೇಟೆ ಇಗ್ಗುತ್ತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಕೊಟ್ಟ್ ಕತ್ತೀರ ಪಿ.ಸೋಮಣ್ಣ ತಿಳಿಸಿದರು.

ಅಂದು ಬೆಳಗ್ಗೆ 10 ಗಂಟೆಗೆ ಸಭೆ ಆರಂಭಗೊಳ್ಳಲಿದ್ದು, ವೇದಿಕೆ ಅಧ್ಯಕ್ಷ ಕೊಟ್ಟ್ ಕತ್ತೀರ ಪಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸದಸ್ಯರ ಮಕ್ಕಳು, ಮೊಮ್ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.

ಇದೇ ಮೊದಲ ಬಾರಿಗೆ ಸುದೀರ್ಘ ಸಮಾಜ ಸೇವಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗೆ ಕಿಗ್ಗಟ್‌ನಾಡ್ ಮ್ಯಾನ್ ಆಫ್ ದಿ ಇಯರ್ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಸರ್ವೇ ಇಲಾಖೆಯಲ್ಲಿ ಎಡಿಎಲ್‌ಆರ್ ಆಗಿ ನಿವೃತ್ತಿ ಹೊಂದಿರುವ ಅಜ್ಜಿಕುಟ್ಟೀರ ಬಿ.ಭೀಮಯ್ಯ ಅವರಿಗೆ ಗೌರವ ನೀಡಲಾಗುವುದು. ಮಹಾಸಭೆಗೆ ವಿಶೇಷ ಆಹ್ವಾನಿಸತಾಗಿ ಚೆಕ್ಕೇರ ಪೊನ್ನು ಪೂಣಚ್ಚ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ವೇದಿಕೆ ಜೀವಾವಧಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಕಿಗ್ಗಟ್‌ನಾಡ್ ಮ್ಯಾನ್ ಆಫ್ ದ ಇಯರ್ ಪ್ರಶಸ್ತಿ ವೇದಿಕೆಗೆ ಹೆಚ್ಚು ಗೌರವ ತರಲಿದೆ. ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಹಿರಿಯರಿಗೆ ಮನ್ನಣೆ ಸಿಗುವಂತಾಗಲಿದೆ ಎಂದರು.

ವೇದಿಕೆ ಕಾರ್ಯದರ್ಶಿ ಚೇಂದೀರ ಎಂ.ಬೋಪಣ್ಣ, ಸದಸ್ಯರಾದ ಮಾಣಿಪಂಡ ಪಾರ್ವತಿ ಜೋಯಪ್ಪ, ಕೇಚೇಟೀರ ಕಾಮುಣಿ ಪೂಣಚ್ಚ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net