

ಶಿವಮೊಗ್ಗ: ಆರೋಗ್ಯ ಕಾಪಾಡಿಕೊಂಡರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ಹೊಂದಬೇಕು. ಮಕ್ಕಳು ಜಂಕ್‌ಫುಡ್‌ಗಳಿಂದ ದೂರವಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಹೇಳಿದರು.
ಗೋಪಾಳ ರಾಮಕೃಷ್ಣ ವಿದ್ಯಾನಿಕೇತನದಲ್ಲಿ ಸೋಮವಾರ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯ ಕನಸನ್ನು ನನಸಾಗಿಸಲು ಸತತ ಪ್ರಯತ್ನಗಳ ಜತೆಗೆ ಆರೋಗ್ಯವೂ ಅತಿ ಮುಖ್ಯ ಎಂದು ಅಭಿಪ್ರಾಯಪಟ್ಟರು.
ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ಶೋಭಾ ವೆಂಕಟರಮಣ ಮಾತನಾಡಿ, ಪಾಲಕರು, ಗುರುಗಳಂತೆ ವೈದ್ಯರನ್ನೂ ನಾವು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತೇವೆ. ನಮ್ಮ ಜೀವ ರಕ್ಷಕರಾದ ವೈದ್ಯರಿಗೆ ಗೌರವ ಸೂಚಿಸುವುದು ಆದ್ಯ ಕರ್ತವ್ಯ ಎಂದರು.
ಡಾ. ಧನಂಜಯ ಸರ್ಜಿ ಅವರನ್ನು ವಿದ್ಯಾಸಂಸ್ಥೆ ಪರವಾಗಿ ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕರಾದ ತೀರ್ಥೇಶ್, ಟಿ.ವಿ.ಗಜೇಂದ್ರನಾಥ್ ಇತರರಿದ್ದರು.