ಸ್ಕ್ಯಾನಿಂಗ್​ಗಿಲ್ಲ, ಶಸ್ತ್ರಚಿಕಿತ್ಸೆಯೂ ಇಲ್ಲ! ಕೇವಲ ಬಾಯಲ್ಲಿ ಕಿಡ್ನಿ ಕಲ್ಲು ತೆಗಿತಾನಂತೆ ಈ ಭೂಪ; ಏನಿದರ ರಹಸ್ಯ? | Kidney Baba

ವಿಜಯವಾಣಿ (5)
Published on

Kidney Baba:ವಿಜ್ಞಾನ, ವೈದ್ಯ ಲೋಕಕ್ಕೆ ಅಚ್ಚರಿ ಉಂಟು ಮಾಡುವಂತ ಕೆಲವು ವಿಚಾರಗಳು ನಿಜಕ್ಕೂ ನಮ್ಮನ್ನು ನಿಬ್ಬೆರಗಾಗಿಸುತ್ತವೆ. ಅಂತಹ ಅಪರೂಪದ ಘಟನೆಗಳು ಆಗಾಗ್ಗೆ ನಮ್ಮ ಕಣ್ಣಿಗೆ ಬೀಳುತ್ತಿರುತ್ತವೆ. ಮಂತ್ರಗಳಿಂದ ರೋಗಗಳನ್ನು ಗುಣಪಡಿಸಬಹುದೇನೋ? ಅಸ್ಪಷ್ಟ. ಆದರೆ, ಯಾವುದೇ ಸ್ಕ್ಯಾನಿಂಗ್​, ಶಸ್ತ್ರಚಿಕಿತ್ಸೆ ಇಲ್ಲದೆ ಕೇವಲ ತನ್ನ ಬಾಯಿಂದ ಹೊಟ್ಟೆ ಭಾಗದಲ್ಲಿರುವ ಕಿಡ್ನಿಯನ್ನು ಹೊರತೆಗೆಯುವ ವ್ಯಕ್ತಿಯ ಚಮತ್ಕಾರ ಸದ್ಯ ನೆಟ್ಟಿಗರ ಹುಬ್ಬೇರಿಸಿದೆ.

ಇಂದಿಗೂ ನಮ್ಮ ಸಾಮಾಜದಲ್ಲಿ ಕೆಲವರು, ದೇವರ ಹೆಸರಲ್ಲಿ ದೊಡ್ಡ ಕಾಯಿಲೆಯನ್ನು ಗುಣಪಡಿಸುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ಹೀಗೆ ಹೇಳಿಕೊಂಡೇ ಜನರ ನಂಬಿಕೆಗೆ ದ್ರೋಹ ಬಗೆಯುತ್ತಾರೆ. ಇಂತಹ ಮೂಢನಂಬಿಕೆಗಳು, ಕಣ್ಣಿಗೆ ಮಣ್ಣೆರಚುವ ವಿಷಯಗಳಿಗೆ ಹೆಚ್ಚು ಆಸಕ್ತಿ ತೋರುವ ಮೂಲಕ ನಮ್ಮ ಜನರು ಇಂದಿಗೂ ಇಂಥಾ ಪದ್ಧತಿಗಳನ್ನು ಮುಂದುವರಿಯಲು ಬಿಟ್ಟಿದ್ದಾರೆ.

ಇಲ್ಲೊಂದು ಘಟನೆ ಕೂಡ ಅದೇ ರೀತಿ ಇದ್ದು, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕಂಡುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರು ಈತನ ಚಮತ್ಕಾರ ಕಂಡು, ಕಿಡ್ನಿ ಕಲ್ಲುಗಳನ್ನು ತೆಗೆಸಲು ಸರತಿ ಸಾಲಿನಲ್ಲಿ ನಿಲ್ಲುತ್ತಾರಂತೆ. ಅಷ್ಟಕ್ಕೂ ಏನು ಇದೆಲ್ಲ? ಎಂಬ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ.

ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಸ್ಕ್ಯಾನ್‌ಗಳಿಲ್ಲದೆ ಕೇವಲ ಮಂತ್ರಗಳೊಂದಿಗೆ ಚಿಕಿತ್ಸೆ ನೀಡುವ ಈತ, ಬಾಯಿಂದ ಹೊಟ್ಟೆಯ ಭಾಗದಲ್ಲಿರುವ ಕಿಡ್ನಿ ಕಲ್ಲುಗಳನ್ನು ತೆಗೆಯುತ್ತಾನೆ ಎಂದು ಹೇಳಲಾಗಿದೆ. ಬಾಬಾ ಎಂದು ಕರೆಯಲ್ಪಡುವ ಈತನ ಕೆಲಸಕ್ಕೆ ಹಲವರು ಮರುಳಾಗಿದ್ದು, ತಮ್ಮ ದೇಹದ ಕಿಡ್ನಿ ಕಲ್ಲನ್ನು ತೆಗಿಸಲು ಈ ವ್ಯಕ್ತಿಯ ಬಳಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎನ್ನಲಾಗಿದೆ. ಇದರ ವಿಡಿಯೋ ತುಣುಕು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಹಲವರ ಕೆಂಗಣ್ಣಿಗೆ  ಗುರಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net