ಬಿಗ್​ ಬಾಸ್​ಗೆ ಗುಡ್​ ಬೈ ಹೇಳಿದ ಕಿಚ್ಚ ಸುದೀಪ್! ಇದು Bigg Boss ಕೊನೆಯ ಪಂಚಾಯಿತಿ! Kichcha Sudeep

Kichcha Sudeepa
Published on

ಬೆಂಗಳೂರು:  ( Kichcha Sudeep ) ಸ್ಯಾಂಡಲ್​ವುಡ್​​ ನಟ ಕಿಚ್ಚ ಸುದೀಪ್​ ಅವರು  ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಜನಪ್ರಿಯ ಕಾರ್ಯಕ್ರಮವಾದ ಬಿಗ್​ಬಾಸ್​​ನ್ನು ನಡೆಸಿ ಕೊಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು 11 ಸೀಸನ್​ಗಳ ಕಾಲ ಬಿಗ್ ಬಾಸ್ ಕನ್ನಡವನ್ನು ನಿರೂಪಿಸಿದ ನಂತರ ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದಾರೆ ಎಂದು ಘೋಷಿಸಿದ್ದಾರೆ.  ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿದ್ದಾರೆ.

‘ಬಿಗ್ ಬಾಸ್​ ಸೀಸನ್ 11’ ಆರಂಭ ಆಗಿ ಕೆಲವೇ ವಾರಗಳಲ್ಲಿ ಸುದೀಪ್ ಟ್ವೀಟ್ ಮಾಡಿದ್ದರು. ಈಗ ಸುದೀಪ್ ಅವರು ಮತ್ತೊಮ್ಮೆ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ವಿಚಾರವನ್ನು ಮತ್ತೊಮ್ಮೆ ಖಚಿತಪಡಿಸಿದ್ದಾರೆ.

 ಟ್ವೀಟ್​​ನಲ್ಲಿ ಏನಿದೆ?:

ಬಿಗ್ ಬಾಸ್​ನ ಕಳೆದ 11 ಸೀಸನ್‌ಗಳಿಂದ ನಾನು ಆನಂದಿಸಿದ್ದೇನೆ.  ನೀವು ತೋರಿದ ಎಲ್ಲಾ ಪ್ರೀತಿಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಮುಂಬರುವ ಫಿನಾಲೆ, ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್. ನಿಮ್ಮನ್ನು ಒಳ್ಳೆಯ ರೀತಿಯಲ್ಲಿ ರಂಜಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿ ಇದೆ. ಈ ಅವಕಾಶಕ್ಕಾಗಿ ಕಲರ್ಸ್​ ಕನ್ನಡಕ್ಕೆ ಧನ್ಯವಾದ’ ಎಂದಿದ್ದಾರೆ.

ಬಿಗ್‌ ಬಾಸ್‌ ಕಾರ್ಯಕ್ರಮವನ್ನ ನಟ ಕಿಚ್ಚ ಸುದೀಪ್‌ ಅವರು ನಡೆಸಿಕೊಡುತ್ತಿದ್ದು, ಆರಂಭದಿಂದ ಬಿಗ್ ಬಾಸ್ ಕನ್ನಡದ ಹೋಸ್ಟ್ ಆಗಿ 11 ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ನನ್ನ ಕೊನೆಯ ಸೀಸನ್ ಎಂದು ನಟ ಕಿಚ್ಚ ಸುದೀಪ್‌ ಅವರು ಈ ಮೊದಲು ಹೇಳಿದ್ದರು. ಈಗ ಅವರು ಅಧಿಕೃತವಾಗಿ ಬಿಗ್ ಬಾಸ್ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net