ಬಿಗ್​​​ ಬಾಸ್​​ ಸೀಸನ್​ 1 ರಿಂದ 10ರವರೆಗೂ ಕಿಚ್ಚನ ಡ್ಯಾಶಿಂಗ್ ಲುಕ್..! ಔಟ್​​​ಫಿಟ್​​ಗಳನ್ನ ನೋಡೋಕೆ ವೀಕೆಂಡ್ಸ್​​​​ಗೆ​​​​​​ ಕಾಯೋ ಫ್ಯಾನ್ಸ್​..!

kkmix
Published on

ಬಹಳಷ್ಟು ಜನರು ವೀಕೆಂಡ್ ಬಿಗ್​ಬಾಸ್ ನೋಡುವುದು ಕಿಚ್ಚನ ಭರ್ಜರಿ ಲುಕ್ ನೋಡೋಕೆ. ಹಾಗಾಗಿ ಕೋಟಿ ಕನ್ನಡಿಗರ ನಿರೀಕ್ಷೆಗೆ ತಕ್ಕಂತೆ ಬಾದ್ ಶಾ ಡ್ರೆಸ್ ಮಾಡ್ತಾರೆ. ಇತ್ತೀಚೆಗೆ ಕಿಚ್ಚ ಧರಿಸಿದ ಬ್ಲ್ಯಾಕ್ ಔಟ್​ ಫಿಟ್ ಬೆಲೆ ಎಷ್ಟಿದೆ ಗೊತ್ತಾ?


ಕನ್ನಡ ಬಿಗ್​ಬಾಸ್​ನಲ್ಲಿ ವೀಕೆಂಡ್​ನಲ್ಲಿ ದೊಡ್ಡ ಆಕರ್ಷಣೆ ನಟ ಕಿಚ್ಚ ಸುದೀಪ್. ಸ್ಯಾಂಡಲ್​ವುಡ್ ಬಾದ್ ಶಾ ಕಾರ್ಯಕ್ರಮ ನಡೆಸಿಕೊಡೋದನ್ನು ನೋಡೋದೆ ಒಂದು ಚಂದ. ಅದಕ್ಕೂ ಚಂದ ಅವರ ಫ್ಯಾಷನ್ ಸೆನ್ಸ್.

ಸೀಸನ್​ 1ರಿಂದ 10 ರವರೆಗೂ ಕಿಚ್ಚನ ಔಟ್​​ಫಿಟ್​​ ನೋಡೋದಕ್ಕಾಗಿಯೇ ಜನ ವೀಕೆಂಡ್​ನಲ್ಲಿ ಕಾದು ಕುಳಿತಿರುತ್ತಾರೆ.


ಸುದೀಪ್ ತುಂಬಾ ಭರ್ಜರಿಯಾಗಿರೋ ಔಟ್​ಫಿಟ್ ಧರಿಸುತ್ತಾರೆ. ಅವರ ಫ್ಯಾಷನ್, ಡ್ರೆಸ್ಸಿಂಗ್, ಗಾಗಲ್ಸ್, ಶೂಸ್ ಎಲ್ಲವನ್ನೂ ಜನರು ಭಾರೀ ಕುತೂಹಲದಿಂದ ನೋಡುತ್ತಾರೆ.


ಅಷ್ಟಾಗಿ ವೀಕೆಂಡ್ ಬಂದ್ರೆ ಕಿಚ್ಚ ಅವರ ಡ್ರೆಸ್ ನೋಡೋಕೆ ಜನ ಕುತೂಹಲದಲ್ಲಿರುತ್ತಾರೆ.

ಕಿಚ್ಚ ಸುದೀಪ್ ಇತ್ತೀಚೆಗೆ ಧರಿಸಿದ ಬ್ಲಾಕ್​​ ಡ್ರೆಸ್​​ 420 ಡಾಲರ್ ಇದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ. ಅಂದರೆ ಈ ಡ್ರೆಸ್ ಬೆಲೆ ಬರೋಬ್ಬರಿ 34, 960 ರೂಪಾಯಿಗಳು. ಬ್ಲ್ಯಾಕ್ ಸ್ಟ್ರೈಪ್ಡ್ ಟರ್ಟಲ್​ನೆಕ್ ಸ್ಟೈಲ್​ಗೆ ಸೇರಿದೆ ಈ ಡ್ರೆಸ್.


ಕಿಚ್ಚ ಅವರು ಆರಂಭದ ದಿನವೂ ಧರಿಸಿದ ಡ್ರೆಸ್ ತುಂಬಾ ಆಕರ್ಷಕವಾಗಿತ್ತು. ಬ್ಲ್ಯಾಕ್​ ಕ್ರಿಸ್ಟಲ್ ಡ್ರೆಸ್ ಗ್ರ್ಯಾಂಡ್ ಲುಕ್ ಕೊಟ್ಟಿತ್ತು. ನಟನ ಪ್ರತಿ ವಾರದ ಡ್ರೆಸ್ ಕೂಡಾ ತುಂಬಾ ಡಿಫರೆಂಟ್ ಆಗಿರುತ್ತದೆ.


ಸೀಸನ್​​ 1ರಿಂದ 10 ರವೆಗೂ ಕಿಚ್ಚ ಸುದೀಪ್​ ಧರಿಸಿರುವ ಡ್ರೆಸ್​​​​​ಗಳು ಒಂದಕ್ಕಿಂತ ಒಂದು ವಿಭಿನ್ನ ಸ್ಟ್ಐಲ್​ನದ್ದೇ ಆಗಿದೆ.
ಇನ್ನು ಕಿಚ್ಚ ಅವರ ಆಂಕರಿಂಗ್​ ಬಗ್ಗೆ ಹೇಳೋದೇ ಬೇಡ. ಅಷ್ಟು ಚೆನ್ನಾಗಿ ವೀಕೆಂಡ್​​ ಪಂಚಾಯತಿಯನ್ನ ನಿಭಾಯಿಸಿ ಎಲ್ಲರಿಗೂ ತಿಳಿ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net