ಸ್ಯಾಂಡಲ್​ವುಡ್​ ಡ್ರಗ್ ಮಾಫಿಯಾ ಬಗ್ಗೆ ಸುದೀಪ್​ ಹೇಳಿದ್ದೇನು?

ದದದ
Published on

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ನಿರ್ದೇಶಕ ಇಂದ್ರಜಿತ್​ ಹಲವು ನಟ ಮತ್ತು ನಟಿಯರ ಹೆಲಸರುಗಳನ್ನು ಬಹಿರಂಗ ಪಡಿಸುವುದಾಗಿಯೂ ಹೇಳಿಕೊಂಡಿದ್ದಾರೆ. ನಿನ್ನೆ ಸಿಸಿಬಿ ಕಚೇರಿಗೆ ತೆರಳಿ ಮಾಹಿತಿ ನೀಡಿ ಬಂದಿದ್ದಾರೆ. ಇದೀಗ ಇದೇ ವಿಚಾರವಾಗಿ ನಟ ಕಿಚ್ಚ ಸುದೀಪ್​ ಪ್ರತಿಕ್ರಿಯೆ ನೀಡಿದ್ದಾರೆ.

ಜನ್ಮದಿನದ ಹಿನ್ನೆಲೆಯಲ್ಲಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಇಂದ್ರಜಿತ್​ ಜತೆಗೆ ತೆರಳಿದ್ದ ಸುದೀಪ್​, ಶ್ರೀಗಳ ಆಶೀರ್ವಾದ ಪಡೆದ ಬಳಿಕ, ಸ್ಯಾಂಡಲ್​ವುಡ್​ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.

‘ಪ್ರತಿ ವರ್ಷ ಜನ್ಮದಿನಕ್ಕೆ ಈ ರೀತಿ ಧಾರ್ಮಿಕ ಕ್ಷೇತ್ರಗಳಿಗೆ ಬರುವುದು ಸಹಜ. ಶ್ರೀಗಳು ನಿಧನರಾದ ಬಳಿಕ ಮತ್ತು ಕಳೆದ ನಾಲ್ಕು ತಿಂಗಳಿಂದ ನಾನು ಮಠಕ್ಕೆ ಭೇಟಿ ನೀಡಿರಲಿಲ್ಲ. ಭೇಟಿ ನೀಡುವ ಬಗ್ಗೆ ಇಂದ್ರಜಿತ್​ ಅವರ ಬಳಿ ಮೊದಲೇ ಚರ್ಚಿಸಿದ್ದೆ. ಒಟ್ಟಿಗೆ ಬರುವುದು ಮೊದಲೇ ಪ್ಲಾನ್​ ಆಗಿತ್ತು’ ಎಂದಿದ್ದಾರೆ ಸುದೀಪ್​.

‘ಇಂಥ ಪುಣ್ಯ ಕ್ಷೇತ್ರಗಳಲ್ಲಿ ಡ್ರಗ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡುವುದು ಸರಿಯಲ್ಲ. ಈ ಸ್ಥಳದಲ್ಲಿ ಆ ಪ್ರಶ್ನೆಯನ್ನು ಕೇಳಬೇಡಿ. ನಾವು ಉತ್ತರಿಸಲು ಸಿದ್ಧರಿಲ್ಲ’ ಎಂದು ಸುದೀಪ್​ ಉತ್ತರ ನೀಡಿದರೆ, ‘ಈಗಾಗಲೇ ತಿಳಿಸಬೇಕಾದ ವಿಚಾರವನ್ನು ನಿನ್ನೆಯೇ ನೀಡಿದ್ದೇನೆ’ ಎಂದು ಇಂದ್ರಜಿತ್​ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net