

ಬೆಂಗಳೂರು: ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-8 ರೋಚಕವಾಗಿ ಮುಂದುವರಿಯುತ್ತಿದೆ. ವೀಕೆಂಡ್ನಲ್ಲಿ 'ವಾರದ ಕತೆ ಕಿಚ್ಚನ ಜೊತೆ' ಎಪಿಸೋಡ್ನಲ್ಲಿ ಕಾಣಿಸಿಕೊಳ್ತಿದ್ದ ಕಿಚ್ಚ ಸುದೀಪ್ ಈ ವಾರ ಬರಲ್ಲ!
ಈ ವಾರದ ಬಿಗ್ ಬಾಸ್ ವೀಕೆಂಡ್ನಲ್ಲಿ (ಶನಿವಾರ-ಭಾನುವಾರ) ಕಿಚ್ಚ ಇರೋದಿಲ್ಲ. ಈ ಬಗ್ಗೆ ಸ್ವತಃ ಸುದೀಪ್ ಅವರೇ ಟ್ವೀಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆ ಬಿಗ್ ಬಾಸ್ನ ವೀಕೆಂಡ್ ಕಾರ್ಯಕ್ರಮದಲ್ಲಿ ಈ ವಾರ ಪಾಲ್ಗೊಳ್ಳುತ್ತಿಲ್ಲ. ವೈದ್ಯರ ಸಲಹೆ ಮೇರೆಗೆ ಸ್ವಲ್ಪ ವಿಶ್ರಾಂತಿ ಪಡೆಯಬೇಕಿದೆ ಎಂದು ತಿಳಿಸಿದ್ದಾರೆ. ಇತ್ತ ಈ ವೀಕೆಂಡ್ ಬಿಗ್ಬಾಸ್ನ ಕ್ರಿಯೇಟಿವ್ ಟೀಂ ಏನು ಮಾಡಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.