ರಜನಿಕಾಂತ್ ಅವರ ಅಣ್ಣಾತ್ತೆ ಸಿನಿಮಾದಲ್ಲಿ ನಟಿಸಬಾರದಿತ್ತು; ಈ ಆಲೋಚನೆ ಇಂದಿಗೂ ನನ್ನಲಿದೆ ಎಂದಿದ್ದೇಕೆ ಖುಷ್ಬೂ | Khushbu

Untitled design (97)
Published on

ಚೆನ್ನೈ: ನಟಿ ಖುಷ್ಬೂ (Khushbu) ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್​​ನಲ್ಲೂ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ರಾಜಕಾರಣಿಯಾಗಿರುವ ಅವರು ಇತ್ತೀಚಿನ ಸಂದರ್ಶವೊಂದರಲ್ಲಿ ತಮ್ಮ ವೃತ್ತಿ ಜೀವನದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ವೃತ್ತಿ ಜೀವನದಲ್ಲಿ ಎದುರಿಸಿದ ಸವಾಲುಗಳು, ಇಲ್ಲಿಯವರೆಗೂ ನಾನು ಮಾಡಿರುವ ಚಿತ್ರಗಳಲ್ಲಿ ಯಾಕೆ ನಟಿಸಿದೆ? ಅನೇಕ ಸಂಕಷ್ಟದ ಯೋಜನೆಗಳಿವೆ ಎಂದು ಹೇಳಿದರು.

ಇಲ್ಲಿಯವರೆಗೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೇನೆ. ದಕ್ಷಿಣ ಸಿನಿಮಾ ರಂಗದಲ್ಲಿನ ಪಟ್ಟಿ ದೊಡ್ಡದಾಗಿದ್ದರೂ ಕೆಲವೊಂದು ಬಾಲಿವುಡ್​ ಸಿನಿಮಾಗಳಲ್ಲೂ ನಟಿಸಿದ್ದೇನೆ. ಆದರೆ ದಕ್ಷಿಣದಲ್ಲಿ ನಟಿಸಿದ ಕೆಲವು ಚಿತ್ರಗಳ ಬಗ್ಗೆ ಯೋಚಿಸಿದಾಗ, ನಾನು ಅದರ ಭಾಗವಾಗಿರಲಿಲ್ಲ ಎಂದು ಅನಿಸುತ್ತದೆ. ಉದಾಹರಣೆಗೆ ರಜನಿಕಾಂತ್ ಅಭಿನಯದ ಅಣ್ಣಾತ್ತೇ ಸಿನಿಮಾ.

ಚಿತ್ರದಲ್ಲಿ ಮೀನಾ ಮತ್ತು ನಾನು ಇದ್ದೆವು ಮತ್ತು ಆರಂಭದಲ್ಲಿ ನಾವಿಬ್ಬರೂ ನಾಯಕಿಯರಂತೆ ಇರುತ್ತೇವೆ ಎಂದು ಹೇಳಲಾಗಿತ್ತು. ರಜನಿ ಸರ್ ಜೊತೆ ಬೇರೆ ಯಾವ ನಟನೂ ಇರಲ್ಲ, ನಾವೂ ಇರುತ್ತೇವೆ ಎಂಬ ನಂಬಿಕೆಯಿಂದ ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ಆ ಪಾತ್ರ ನನಗೆ ಇಷ್ಟವಾಯಿತು. ಆದರೆ ಚಿತ್ರ ಪ್ರದರ್ಶನದ ಸಮಯದಲ್ಲಿ ಎಲ್ಲವೂ ಬದಲಾಗಿತ್ತು. ರಜಿನಿ ಸರ್​ಗೆ ಇದ್ದಕ್ಕಿದ್ದಂತೆ ಹೊಸ ನಾಯಕಿಯನ್ನು ಹಾಕಲಾಗಿತ್ತು. ಅದರಲ್ಲಿ ಒಂದು ಪಾತ್ರವನ್ನು ತೆಗೆದುಹಾಕಲಾಗಿತ್ತು. ಆಗ ನನ್ನ ಪಾತ್ರವು ವ್ಯಂಗ್ಯವಾಯಿತು ಎಂದು ನನಗೆ ಅನ್ನಿಸಿತು. ಡಬ್ಬಿಂಗ್ ಸಮಯದಲ್ಲಿ ಚಿತ್ರವನ್ನು ನೋಡಿದಾಗ ನನಗೆ ತುಂಬಾ ನಿರಾಸೆಯಾಯಿತು ಎಂದು ಹೇಳಿದರು.

ಈ ಬದಲಾವಣೆಗೆ ರಜನಿಕಾಂತ್​ ಅವರು ಕಾರಣವಾಗಿರಬಹುದೇ ಎಂದು ಖುಷ್ಬೂ ಅವರನ್ನು ಕೇಳಲಾಯಿತು. ಆದರೆ ಇದನ್ನು ತಳ್ಳಿಹಾಕಿದ ನಟಿ, ಅವರು ಅಂತಹ ವ್ಯಕ್ತಿಯಲ್ಲ. ನಾನು ಅವರನ್ನು ಹಲವು ವರ್ಷಗಳಿಂದ ಬಲ್ಲೆ. ನಿಜವಾಗಿಯೂ ಏನಾಯಿತು ಎಂದು ನನಗೆ ತಿಳಿದಿಲ್ಲ. ಬಹುಶಃ ಅಭಿಮಾನಿಗಳು ಬೇಡಿಕೆ ಇಟ್ಟಿರಬಹುದು ಅಥವಾ ನಿರ್ದೇಶಕ ಮತ್ತು ನಿರ್ಮಾಪಕರು ಹೊಸ ನಾಯಕಿಯನ್ನು ಬದಲಾಯಿಸಲು ಬಯಸಿರಬಹುದು. ಆರಂಭದಲ್ಲಿ ನಾನು ಮತ್ತು ಮೀನಾ ಇಬ್ಬರೂ ರಜನಿ ಸರ್ ಜತೆ ಪ್ರತ್ಯೇಕ ಡ್ಯುಯೆಟ್ ಹಾಡಿದ್ದೆವು. ಬಹುಶಃ ನಂತರ ಸರಿಯಾದ ಜೋಡಿಯನ್ನು ಮಾಡಬೇಕೆಂದು ನಿರ್ಧರಿಸಬಹುದು ಎಂದು ತಿಳಿಸಿದರು.

ರಜನಿಕಾಂತ್ ನಾಯಕನಾಗಿದ್ದು, ಶಿವ ನಿರ್ದೇಶನದ ಚಿತ್ರ 'ಅನ್ನಾತ್ತೆ'. 2021ರಲ್ಲಿ ಬಿಡುಗಡೆಯಾಯಿತು. ನಯನತಾರಾ ನಾಯಕಿಯಾಗಿದ್ದ ಈ ಸಿನಿಮಾದಲ್ಲಿ ಮೀನಾ ಮತ್ತು ಖುಷ್ಬೂ ಇಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ತೆಲುಗಿನಲ್ಲಿ 'ಪೆದ್ದಣ್ಣ' ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net