ಹೂಲಿಹಳ್ಳಿ ಸರ್ಕಾರಿ ಶಾಲೆ ಮಕ್ಕಳು ತಾಲೂಕು ಮಟ್ಟಕ್ಕೆ ಆಯ್ಕೆ

11-RNR-03
Published on

ರಾಣೆಬೆನ್ನೂರ: ತಾಲೂಕಿನ ಕಾಕೋಳದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾಕೋಳ ಮಂಡಲ ಮಟ್ಟದ ಬಾಲಕರ ಕ್ರೀಡಾಕೂಟದ ಖೋಖೋ ಪಂದ್ಯದಲ್ಲಿ ಹೂಲಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ತಂಡ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳಾದ ಮಾಲತೇಶ ಬತ್ತೇರ, ರಾಕೇಶ ಗುಡಗೂರ, ಪ್ರವೀಣ ಮೋಡಕಲಶ, ನಾಗರಾಜ ಕುರಡೇಕರ, ಪರಶುರಾಮ ಮಡಿವಾಳರ, ನಾಗರಾಜ ಶಂಬಣ್ಣನವರ, ಪ್ರಭುಗೌಡ ಹೊಸಮನಿ, ಯಶವಂತ ನಂಬರ, ಹರೀಶ ಬಾಳಗೌಡ್ರು, ಭಾಸ್ಕರಾಚಾರ್ಯ ಕಮ್ಮಾರ ತಂಡದಲ್ಲಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕಿ ಸಾವಿತ್ರಿಬಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net