'ಖತರ್ನಾಕ್​ ವಿವಾಹ'ಕ್ಕೆ ಸ್ವಾಗತ: 'ಬೀಡಿ ಕುಮಾರಿ' ವೆಡ್ಸ್​ 'ಕ್ಯಾನ್ಸರ್​ ಕುಮಾರ'ನ ಲಗ್ನ ಪತ್ರಿಕೆ ವೈರಲ್​

ವಿಜಯವಾಣಿ - 2024-12-24T220202.579
Published on

Khatarnaak Vivah: ಮದುವೆ ಅಂದಾಕ್ಷಣ ಅದೆಷ್ಟೋ ಮಂದಿಗೆ ಬಗೆಬಗೆಯ ಕನಸು ಮೂಡಲು ಶುರುವಾಗುತ್ತದೆ. ತಾವು ದಾಂಪತ್ಯ ಜೀವನಕ್ಕೆ ಕಾಲಿಡುವ ಕ್ಷಣಗಳು ನೆನಪಿನಲ್ಲಿ ಉಳಿಯಬೇಕು, ಬಹಳ ವಿಭಿನ್ನವಾಗಿ ಸಮಾರಂಭ ಇಟ್ಟುಕೊಳ್ಳಬೇಕು, ಯಾರೂ ಮಾಡಿರದ ರೀತಿಯಲ್ಲಿ ನಾವು ವಿವಾಹವಾಗಬೇಕು ಎಂಬ ಹತ್ತಾರು ಆಸೆ, ಕನಸು ಹೊತ್ತಿರುತ್ತಾರೆ. ಆದರೆ, ಕೆಲವು ತಂದೆ-ತಾಯಂದಿರ ಆಸೆ, ಮಾತಿನಂತೆ ಈಡೇರಿದರೆ, ಇನ್ನೂ ಕೆಲವು ಮಕ್ಕಳ ಬಯಕೆಯಂತೆಯೇ ನಡೆಯುತ್ತದೆ. ವಿಚಿತ್ರ, ವಿಭಿನ್ನವಾಗಿ ದಾಂಪತ್ಯಗಳು ನಡೆಯುವುದು ನಾವೆಲ್ಲ ನೋಡಿದ್ದೇವೆ. ಆದರೆ, ಇಲ್ಲೊಂದು ಮದುವೆ ಮಾತ್ರ ಆಮಂತ್ರಣ ಪತ್ರಿಕೆ ಮೂಲಕವೇ ಭಾರೀ ಸದ್ದು ಮಾಡುತ್ತಿರುವುದು ವಿಶೇಷ.

ಬೀಡಿ ಕುಮಾರಿ weds​ ಕ್ಯಾನ್ಸರ್​ ಕುಮಾರ್

ವಧು ಮತ್ತು ವರನ ಹೆಸರನ್ನು ಚಿ.ರಾ ಮತ್ತು ಚಿ.ಸೌ ಎಂದು ಮದುವೆಯ ಕರೆಯೋಲೆಯಲ್ಲಿ ಹೆಸರಿಸಲಾಗುತ್ತದೆ. ಆನಂತರ ಹುಡುಗ, ಹುಡುಗಿಯ ಪೋಷಕರ ಹೆಸರು ಮತ್ತು ವಿಳಾಸ ಹಾಕಲಾಗುತ್ತದೆ. ಅದಾದ ಮೇಲೆ ಸಂಬಂಧಿಕರು, ಬಂಧು-ಮಿತ್ರರ ಹೆಸರು ಮತ್ತೊಂದು, ಮಗದೊಂದು. ಆದರೆ, ಈ ಜೋಡಿಯ ಲಗ್ನ ಪತ್ರಿಕೆಯಲ್ಲಿ ವಿಚಿತ್ರವಾಗಿ ಹೆಸರನ್ನು ಪ್ರಿಂಟ್ ಮಾಡಿಸಿರುವ ಸ್ನೇಹಿತರು, ಬೀಡಿ ಕುಮಾರಿ (ವಧು) ವೆಡ್ಸ್​ ಕ್ಯಾನ್ಸರ್​ ಕುಮಾರ​ (ವರ) ಎಂದು ಹಾಕಿಸಿರುವುದು ನೋಡುಗರ ಗಮನಸೆಳೆದಿದೆ.

ಸಮಾರಂಭಕ್ಕೆ ಜನರನ್ನು ಆಹ್ವಾನಿಸುವ ಮದುವೆ ಕಾರ್ಡ್‌ನ ಫೋಟೋ ಸದ್ಯ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇವರಿಬ್ಬರ ವಿವಾಹವನ್ನು ಧೂಮಪಾನ ಮತ್ತು ಕ್ಯಾನ್ಸರ್ ಹರಡುವಿಕೆಯನ್ನು ಪ್ರತಿಬಿಂಬಿಸುವ ಜಾಗೃತಿ ಪೋಸ್ಟ್‌ನಂತೆ ತಯಾರಿಸಲಾಗಿದೆ. ಇನ್ನೂ ಮದುವೆಯ ಆಮಂತ್ರಣದ ಶೀರ್ಷಿಕೆಯಲ್ಲಿ "ಖತರ್ನಾಕ್ ಮದುವೆ" ಎಂದು ಬರೆಸಿರುವುದು ನೆಟ್ಟಿಗರ ಹೊಟ್ಟೆ ಹುಣ್ಣಾಗಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net