Video: ಇಸ್ಲಮಾಬಾದ್​ನಲ್ಲಿ ದೇಗುಲ ನಿರ್ಮಿಸಿದರೆ ಹಿಂದುಗಳೆಲ್ಲರನ್ನೂ ಹತ್ಯೆ ಮಾಡುತ್ತಾನಂತೆ 4ರ ಬಾಲಕ!

pakistan
Published on

ನವದೆಹಲಿ: ಭಾರತ ಮತ್ತು ಪಾಕಿಸ್ತಾನದಲ್ಲಿ ಉಭಯ ರಾಷ್ಟ್ರಗಳ ಜನತೆಯ ಬಗ್ಗೆ ಅಷ್ಟೇನೂ ಒಳ್ಳೆಯ ಅಭಿಪ್ರಾಯಗಳಿಲ್ಲ ಎಂಬುದು ಸರ್ವವಿಧಿತ. ಆದರೆ, ಎಂದೂ ಕೂಡ ಪರಸ್ಪರ ಕೊಂದುಕೊಳ್ಳುವ, ಧಾರ್ಮಿಕ ನಂಬಿಕೆಗಳನ್ನು ಹುಸಿಗೊಳಿಸುವ ಬಗ್ಗೆ ಮಾತನಾಡುವುದಿಲ್ಲ. ಆದರೆ, ತನ್ನ ತಂದೆಯ ಒತ್ತಾಯಕ್ಕೆ 4 ವರ್ಷದ ಪಾಕಿಸ್ತಾನ ಪೋರ ಹೇಳಿರುವ ಆಘಾತಕಾರಿ ಮಾತಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ.

ಈ ವಿಡಿಯೋ ತುಣುಕಿನಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಅವರಿಗೆ ಒಂದು ಸಂದೇಶ ರವಾನಿಸಿರುವ ಆ ವ್ಯಕ್ತಿ ತನ್ನ 4 ವರ್ಷದ ಮಗನ ಬಾಯಲ್ಲಿ, ಖಾನ್​ ಸಾಹೇಬ್​, ಇಸ್ಲಾಮಾಬಾದ್​ನಲ್ಲಿ ದೇಗುಲ ನಿರ್ಮಿಸಿದರೆ, ದೇಶದಲ್ಲಿರುವ ಹಿಂದುಗಳನ್ನೆಲ್ಲರನ್ನೂ ಹುಡುಕಿ, ಹುಡುಕಿ ಕೊಲ್ಲುವೆ. ಅರ್ಥ ಆಯಿತಾ? ಅಲ್ಲಾ ಹಫೀಜ್​ ಎಂದು ಮಗನ ತೊದಲು ನುಡಿಗಳಲ್ಲಿ ಹೇಳಿಸಿದ್ದಾನೆ.

ಬಾಲಕನ ಪಕ್ಕದಲ್ಲೇ ನಿಂತಿರುವ ಆತನ ಅಪ್ಪ ಈ ರೀತಿ ಹೇಳುವಂತೆ ಒತ್ತಾಯಿಸುವ ಮೂಲಕ ಎಳವೆಯಿಂದಲೇ ಭಾರತ ವಿರೋಧಿ ಮನೋಭಾವವನ್ನು ಪುತ್ರನಲ್ಲಿ ಬಿತ್ತಲು ಯತ್ನಿಸಿದ್ದಾನೆ.

ಇಸ್ಲಾಮಾಬಾದ್​ನಲ್ಲಿ ದೇಗುಲಕ್ಕೆ ಮೀಸಲಿಟ್ಟಿರುವ ಸ್ಥಳದಲ್ಲಿ ಅಲ್ಪಸಂಖ್ಯಾತ ಹಿಂದುಗಳು ದೇವಸ್ಥಾನ ನಿರ್ಮಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಸೈಟ್​ನ ಸುತ್ತ ತಡೆಗೋಡೆ ನಿರ್ಮಿಸಲು ಮುಂದಾಗಿದ್ದರು. ಆದರೆ, ಇದಕ್ಕೆ ತಡೆಯೊಡಿದ್ದ ರಾಜಧಾನಿ ಅಭಿವೃದ್ಧಿ ಪ್ರಾಧಿಕಾರ, ಕಾನೂನಾತ್ಮಕ ಸಮಸ್ಯೆಗಳಿರುವುದರಿಂದ ಅಲ್ಲಿ ದೇಗುಲ ನಿರ್ಮಾಣವನ್ನು ತಡೆಹಿಡಿದಿರುವುದಾಗಿ ಹೇಳಿತ್ತು.

ಇದನ್ನು ಪ್ರಶ್ನಿಸಿ ಅಲ್ಪಸಂಖ್ಯಾತ ಹಿಂದುಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ವಿಷಯವಾಗಿ ಆ ಸ್ಥಳದಲ್ಲಿ ದೇಗುಲ ನಿರ್ಮಿಸಲು ಅವಕಾಶ ಮಾಡಿಕೊಡುವುದನ್ನು ಪ್ರಶ್ನಿಸಿ ಕೆಲವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡುವ ಬಗ್ಗೆ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net