ಧಾರ್ಮಿಕ ಶಿಕ್ಷಣ ತರಗತಿ ಪ್ರಾರಂಭ

PTR_21 OCT_8
Published on


ಪುತ್ತೂರು: ಕೇರ್ಪಡ ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರ ವತಿಯಿಂದ ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡದ ಸಭಾಂಗಣದಲ್ಲಿ ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗ ಪ್ರಮುಕ್ ಕೇಶವಪ್ರಸಾದ್ ಮುಳಿಯ, ಹಸಂತಡ್ಕ ಮುರಳಿ ಕೃಷ್ಣ ಮಾರ್ಗದರ್ಶನದಲ್ಲಿ ಧಾರ್ಮಿಕ ಶಿಕ್ಷಣ ತರಗತಿ ಪ್ರಾರಂಭಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿದ ಕೃಷ್ಣವೇಣಿ ಪ್ರಸಾದ್ ಮುಳಿಯ ಕಥೆ, ಭಜನೆ ಹಾಗೂ ವಿವಿಧ ಚಟುವಟಿಕೆಗಳ ಮೂಲಕ ೧೦೦ಕ್ಕೂ ಮಿಕ್ಕಿ ನೋಂದಾಯಿತ ವಿದ್ಯಾರ್ಥಿಗಳಿಗೆ ತರಗತಿ ನಡೆಸಿ ಮಾಹಿತಿಯನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ವೀಣಾ ಬಾಲಕೃಷ್ಣ ಧಾರ್ಮಿಕ ಶಿಕ್ಷಣದ ಮಾಹಿತಿ ಹಾಗೂ ತಮ್ಮ ಕೇಂದ್ರದ ಮುಖೇನ ಬಿಡುಗಡೆಗೊಳಿಸಿರುವ ಧಾರ್ಮಿಕ ಪಠ್ಯಪುಸ್ತಕ ಕುರಿತಾಗಿ ಮಾತನಾಡಿದರು.


ಧಾರ್ಮಿಕ ಮತ್ತು ಭಜನಾ ಶಿಕ್ಷಣ ಕೇಂದ್ರ ಕೇರ್ಪಡ ಸಂಚಾಲಕ ವಸಂತ ನಡುಬೈಲು, ಗೌರವಾಧ್ಯಕ್ಷರಾದ ಐತ್ತಪ್ಪ ಅಲೆಕ್ಕಾಡಿ, ವಸಂತ ಹುದೇರಿ, ಅಧ್ಯಕ್ಷ ಧ್ರುವಕುಮಾರ್ ಕೇರ್ಪಡ, ಶ್ರೀ ಕೇತ್ರ ಕೇರ್ಪಡದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರೂಪರಾಜ ರೈ, ಕೇಂದ್ರದ ಸಂಪನ್ಮೂಲ ವ್ಯಕ್ತಿ ಸುಹಾಸ್ ಅಲೆಕ್ಕಾಡಿ, ನಿಂತಿಕಲ್ಲು ವಲಯ ಭಜನಾ ಪರಿಷತ್ ಅಧ್ಯಕ್ಷ ಪದ್ಮನಾಭ ಪೂದೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net