ವೈದ್ಯರ ಎಡವಟ್ಟು; ಎಡಗಾಲು ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ರು!

kerala Operation
Published on

ಕೋಝಿಕ್ಕೋಡ್: ರೋಗಿಗಳು ವೈದ್ಯರನ್ನು ದೇವರಂತೆ ನೋಡುತ್ತಾರೆ. ಕೆಲವೊಮ್ಮೆ ರೋಗಿಗಳ ಜೀವ ಕೈಯಲ್ಲಿರುತ್ತದೆ. ವೈದ್ಯರ ಕೈಯಿಂದಲೂ ಕೆಲವೊಮ್ಮೆ ಸಣ್ಣ ಪುಟ್ಟ ತಪ್ಪುಗಳಾಗುತ್ತವೆ. ಆದರೆ ವೈದ್ಯರು ಎಡಗಾಲು ನೋವಿದ್ದ ಮಹಿಳೆಯ ಬಲಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿರುವ ಘಟನೆ ಕೇರಳದ ಕೋಝಿಕ್ಕೋಡ್‌ನಲ್ಲಿ ನಡೆದಿದೆ.

ಕೇರಳದ ಕಕ್ಕೋಡಿಯ ಸಜಿನಾ ಸುಕುಮಾರನ್ (60) ಅವರು ತಮ್ಮ ಎಡಗಾಲಿನ ಹಿಮ್ಮಡಿಯ ನರಕ್ಕೆ ಗಾಯವಾಗಿತ್ತೆಂದು ಮಾವೂರು ರಸ್ತೆಯಲ್ಲಿರುವ ರಾಷ್ಟ್ರೀಯ ಆಸ್ಪತ್ರೆಯ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಫೆ.20 ರಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಬಂದಿದ್ದರು. ಆದರೆ ಆಪರೇಷನ್ ಮುಗಿದ ನಂತರ ವೈದ್ಯರು ನೋಡಿದರೆ ಸುಜಿನಾ ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿರುವುದು ತಿಳಿದುಬಂದಿದೆ.

ಸಜಿನಾ ಈ ಬಗ್ಗೆ ತಮ್ಮ ಹೇಳಿಕೊಂಡಿದ್ದಾರೆ. 'ನಾನು ನನ್ನ ಎಡಗಾಲಿನ ನೋವಿಗೆ ಶಸ್ತ್ರ ಚಿಕಿತ್ಸೆ ಪಡೆದುಕೊಳ್ಳಲು ಒಪ್ಪಿಗೆ ನೀಡಿದ್ದೆ ಆದರೆ ನನಗೆ ಪ್ರಜ್ಞೆ ಬಂದಾಗ, ನನ್ನ ಬಲಗಾಲು ಭಾರವಾದಂತನಿಸಿತು. ಎದ್ದು ನೋಡಿದಾಗ ನನ್ನ ಬಲಗಾಲಿಗೆ ಸರ್ಜರಿ ಮಾಡಿದ್ದರು. ತಕ್ಷಣ ನರ್ಸ್‌ಗೆ ಕರೆ ಮಾಡಿ ವೈದ್ಯರನ್ನು ಕರೆಯುವಂತೆ ಕೇಳಿಕೊಂಡೆ. ಆದರೆ ನಾನು ವಿಷಯ ಹೇಳಿದಾಗಲಷ್ಟೇ ಅವರಿಗೆ ಗೊತ್ತಾಗಿದೆ' ಎಂದಿದ್ದಾರೆ.

ಆಸ್ಪತ್ರೆಯ ಎಂಡಿ ಡಾ.ಕೆ.ಎಂ.ಆಶಿಕ್ ಮಾತನಾಡಿ, 'ಸಜಿನಾ ಅವರು ಕೆಲ ದಿನಗಳಿಂದ ಡಾ.ಬೆಹಿರ್ಶನ್ ಅವರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ನಾವು ಸುಜಿನಾ ಅವರ ಬಲಗಾಲನ್ನು ಪರೀಕ್ಷಿಸಿದ ನಂತರ ಆ ಕಾಲಿನಲ್ಲಿನ ಗಾಯವನ್ನು ಕಂಡುಕೊಂಡಿದ್ದೇವೆ ಮತ್ತು ಅದನ್ನು ಸುಜಿನಾ ಮತ್ತು ಅವರ ಪತಿಗೆ ತಿಳಿಸಿದ್ದೆವು. ವಿಷಯ ತಿಳಿದ ಬಳಿಕ ಸುಜಿನಾ ಅವರೇ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದರು' ಎಂದಿದ್ದಾರೆ.

ಸಜಿನಾ ಅವರನ್ನು ಡಿಸ್ಚಾರ್ಜ್ ಮಾಡಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ನಡಕ್ಕಾವು ಪೊಲೀಸರು, ಡಾ ಬೆಹಿರ್ಶನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net