

ತಿರುವನಂತಪುರ: ಕರೊನಾ ಸೋಂಕಿನ ವಿರುದ್ಧ ಹತೋಟಿ ಸಾಧಿಸಿರುವ ಕೇರಳದಲ್ಲಿ ಲಾಕ್ಡೌನ್ನ ಕೆಲವು ನಿರ್ಬಂಧಗಳನ್ನು ವಲಯವಾರು ಸಡಿಲಿಸಲಾಗಿದೆ. ರಾಜ್ಯವನ್ನು ನಾಲ್ಕು ವಲಯಗಳಲ್ಲಿ ಗುರುತಿಸಲಾಗಿದ್ದು ನಿರ್ಬಂಧ ಸಡಿಲಿಕೆಯು ಸೋಮವಾರ ಮತ್ತು ಕೆಲವು ಜಿಲ್ಲೆಗಳಲ್ಲಿ ಏ. 24ರಿಂದ ಹಂತ ಹಂತವಾಗಿ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಶನಿವಾರ ಹೊರಡಿಸಿರುವ ಮಾರ್ಗದರ್ಶಿ ತಿಳಿಸಿದೆ.
ಕೆಂಪು, ಕಿತ್ತಳೆ-ಎ, ಕಿತ್ತಳೆ-ಬಿ ಮತ್ತು ಹಸಿರು ವಲಯಗಳೆಂದು ವರ್ಗೀಕರಿಸಲಾಗಿದ್ದು, ಕೆಂಪು ವಲಯದಲ್ಲಿ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾಸರಗೋಡು, ಕಣ್ಣೂರು, ಕೋಳಿಕೋಡ್, ಮಲಪು್ಪರಂಗಳಿವೆ. ಈ ಜಿಲ್ಲೆಗಳಲ್ಲಿ ನಿರ್ಬಂಧ ಕಿಂಚಿತ್ತೂ ಸಡಿಲವಿಲ್ಲ ಮತ್ತು ಈ ಜಿಲ್ಲೆಗಳಲ್ಲಿ ಸೂಕ್ಷ್ಮ ಪ್ರದೇಶಗಳೆಂದು (ಹಾಟ್ಸ್ಪಾಟ್) ಗುರುತಿಸಲಾದ ಸ್ಥಳಗಳನ್ನು ಸೀಲ್ ಮಾಡಲಾಗುವುದು. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಇರಲಿದೆ.
ಕಿತ್ತಳೆ- ಎ ವಲಯದಲ್ಲಿ ಪಟ್ಟನಂತ್ತಿಟ್ಟ, ಎರ್ನಾಕುಲಂ, ಕೊಲ್ಲಂ ಜಿಲ್ಲೆಗಳು ಇವೆ. ಇಲ್ಲಿ ಏ. 24ರಿಂದ ಮಿತ ಪ್ರಮಾಣದಲ್ಲಿ ನಿರ್ಬಂಧ ಸಡಿಲಿಕೆಯಾಗಲಿದೆ. ಕಿತ್ತಳೆ- ಬಿ ವಲಯದಲ್ಲಿ ಅಲಪು್ಪಳ, ತಿರುವನಂತಪುರ, ಪಾಲಕ್ಕಾಡ್ ವಯನಾಡು, ತ್ರಿಶ್ಶೂರ್ ಜಿಲ್ಲೆಗಳಿವೆ. ಇಲ್ಲಿನ ಕೆಲ ನಿರ್ಬಬಂಧಗಳು ಸೋಮವಾರದಿಂದ ಸಡಿಲವಾಗಲಿದೆ. ಹಸಿರು ವಲಯದಲ್ಲಿರುವ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಸರ್ಕಾರ ಹೆಚ್ಚು ಉದಾರವಾಗಿದ್ದು, ಇಲ್ಲೂ ಸೋಮವಾರದಿಂದ ನಿರ್ಬಂಧ ಸಡಿಲಿಕೆ ಜಾರಿಗೆ ಬರಲಿದೆ.
ತ.ನಾಡು ನಿರ್ಬಂಧ ಸಡಿಲಿಕೆ?: ತಮಿಳುನಾಡಿನಲ್ಲಿ ಕರೊನಾ ಸೋಂಕಿತರ ಗುಣಮುಖ ಪ್ರಮಾಣ ಹೆಚ್ಚಳ ಮತ್ತು ಹೊಸದಾಗಿ ಸೋಂಕು ಪ್ರಕರಣದಲ್ಲೂ ಇಳಿಮುಖವಾಗಿರುವುದರಿಂದ ರಾಜ್ಯದಲ್ಲಿ ನಿರ್ಬಂಧ ಸಡಿಲಿಕೆ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ತಮಿಳುನಾಡಿನಲ್ಲಿ 1,372 ಸೋಂಕಿತ ಪ್ರಕರಣಗಳಿದ್ದು, 365 ಮಂದಿ ಗುಣಮುಖರಾಗಿದ್ದಾರೆ. 992 ಸಕ್ರಿಯ ಪ್ರಕರಣಗಳಿವೆ. 15 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಹೊಸ ಪ್ರಕರಣಗಳು ಇಳಿಮುಖವೇನೋ ಆಗುತ್ತಿದೆ. ಇದು ಮತ್ತಷ್ಟು ತಗ್ಗಿದರೆ ಮತ್ತು ಹೊಸದಾಗಿ ಸಾವು ಸಂಭವಿಸದಿದ್ದರೆ ನಿರ್ಬಂಧ ಸಡಿಲಿಸಲು ಅಡ್ಡಿಯಿಲ್ಲ ಎಂದು ಗಣಿತ ವಿಜ್ಞಾನ ಸಂಸ್ಥೆಯ ತಜ್ಞ ಸೀತಭ್ರ ಸಿನ್ಹಾ ಹೇಳಿದ್ದಾರೆ. ಸೋಂಕು ದ್ವಿಗುಣವಾಗುವ ಅವಧಿ ಹೆಚ್ಚಿದೆ. ಇದು ಸೋಂಕು ಹತೋಟಿಗೆ ಬರುವ ಮುನ್ಸೂಚನೆ ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ನಿರ್ದೇಶಕ ಮನೋಜ್ ವಿ. ಮುರ್ಹೆಕರ್ ತಿಳಿಸಿದ್ದಾರೆ.
ಕರೊನಾದಿಂದ ಗುಣಮುಖರಾದ ವೃದ್ಧ ಸಾವು: ಕರೊನಾ ಸೋಂಕಿನಿಂದ ಗುಣಮುಖರಾಗಿದ್ದ 85 ವರ್ಷದ ವ್ಯಕ್ತಿ ಮಲಪು್ಪರಂ ಜಿಲ್ಲೆಯ ಮಂಜೆರಿಯಲ್ಲಿ ಸಾವನ್ನಪ್ಪಿದ್ದಾರೆ. ವೃದ್ಧರಿಗೆ ಹೃದ್ರೋಗ, ಉಸಿರಾಟದ ತೊಂದರೆ ಇತ್ತು. ಇವರ ಕುಟುಂಬದವರನ್ನು ಕ್ವಾರಂಟೈನಲ್ಲಿ ಇರಿಸಲಾಗಿದೆ.
ಹೊಸ ಪ್ರಕರಣಗಳು ಗಣನೀಯ ಕುಸಿತ: ಹೊಸದಾಗಿ ಕರೊನಾ ಸೋಂಕು ತಗುಲುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಬೆರಳೆಣಿಕೆಯ ಸಂಖ್ಯೆಗೆ ಬಂದಿದೆ. ಸೋಂಕು ಪೀಡಿತರು ಗುಣಮುಖವಾಗುವ ಪ್ರಮಾಣ ಕೂಡ ಹೆಚ್ಚಿದೆ ಮತ್ತು ಸಾವಿನ ಸಂಖ್ಯೆ ಎರಡಕ್ಕೆ ತಟಸ್ಥವಾಗಿರುವ ಕಾರಣ ನಿರ್ಬಂಧ ಸಡಿಲ ಮಾಡಲು ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ನಿರ್ಧಾರಿಸಿದೆ. ಕಳೆದ ಒಂದು ವಾರದಿಂದ 32 ಹೊಸ ಸೋಂಕಿತ ಪ್ರಕರಣಗಳ ಪತ್ತೆ ಮತ್ತು ಇದೇ ಅವಧಿಯಲ್ಲಿ 129 ಗುಣಮುಖರು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಕೇರಳದಲ್ಲಿ 399 ಸೋಂಕಿತರಿದ್ದು, ಈ ಪೈಕಿ 257 ಮಂದಿ ಗುಣಮುಖರಾಗಿದ್ದಾರೆ. 140 ಸಕ್ರಿಯ ಪ್ರಕರಣಗಳಿವೆ.