

ಕೇರಳ: ದೇಶದ ಹಲವೆಡೆ ಇದೀಗ ಮುಂಗಾರು ಮಳೆ ಪ್ರವೇಶವಾಗಿದ್ದು, ನದಿ, ಕೆರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿದೆ. ಈ ಮಧ್ಯೆ ಮಳೆಯಲ್ಲಿ ವ್ಯಕ್ತಿಯೊಬ್ಬ ಕೊಡೆ ಬಳಸಿಕೊಂಡು ಮೀನು ಹಿಡಿಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೀನು ಹಿಡಿಯುವ ಟೆಕ್ನಿಕ್ಗೆ ಫಿದಾ ಆಗಿದ್ದಾರೆ.
ಅಧಿಕ ಮಳೆಯಿಂದ ಕೇರಳದ ನದಿ, ಹೊಳೆಗಳು ತುಂಬಿದ್ದು, ಈ ಸಮಯದಲ್ಲಿ ಮೀನು ಹೇರಳವಾಗಿ ಲಭಿಸುತ್ತದೆ. ಇದನ್ನು ತಿಳಿದ ಸ್ಥಳೀಯರು ಮೀನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಇದೇ ರೀತಿ ವ್ಯಕ್ತಿಯೊಬ್ಬ ಕೊಡೆ ಬಳಸಿಕೊಂಡು ಮೀನು ಹಿಡಿಯುವ ಟೆಕ್ನಿಕ್ ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಪಾಲಕ್ಕಾಡ್ ಜಿಲ್ಲೆಯ ಗ್ರಾಮಾಂತರ ಪ್ರದೇಶದ ವ್ಯಕ್ತಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ,(ಏಜೆನ್ಸೀಸ್).