ಮಹಿಳೆಯರ ಸ್ವಾವಲಂಬಿ ಜೀವನ ಆರ್ಥಿಕವಾಗಿ ಸಬಲರಾಗಲು ಪ್ರೇರಣೆ: ರಜನಿ ಪಾಟೀಲ.

11GDG02
Published on

ವಿಜಯವಾಣಿ ಸುದ್ದಿಜಾಲ ಗದಗ
ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಸ್ವಾವಲಂಭಿ ಜೀವನ ನಡೆಸಬಹುದು. ಆರ್ಥಿಕವಾಗಿ ಸಮಾಜದಲ್ಲಿ ಸಬಲರಾಗಲು ಪ್ರೇರಣೆ. ಎಲ್ಲ ಮಹಿಳೆಯರು ತಮ್ಮ ಅಭಿರುಚಿಗೆ ತಕ್ಕಂತೆ ಬೇರೆ ಬೇರೆ ಕೆಲಸಗಳನ್ನು ಮಾಡಿ ಸ್ವಾವಲಂಬಿಗಳಾಗಬೇಕು ಎಂದು ರಜನಿ ಪಾಟೀಲ ಹೇಳಿದರು.
ಇನ್ನರ್​ ವೀಲ್​ ಕ್ಲಬ್​ ಸುವರ್ಣ ಮಹೋತ್ಸವದ ಅಧ್ಯರಾಗಿ ಆಯ್ಕೆಗೊಂಡ ಅವರನ್ನು ಸಂದ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಇನ್ನರ್​ ವೀಲ್​ ಕ್ಲಬ್​ ನಲ್ಲಿ 50 ವರ್ಷದಿಂದ ಸೇವೆ ಸಲ್ಲಿಸಿದ್ದೇನೆ. ವೈದ್ಯರ ಪತ್ನಿಯಾದರೂ ತಮ್ಮ ಹವ್ಯಾಸವಾದ ಅಡುಗೆಯ ತರಗತಿಗಳನ್ನು ತೆಗೆದುಕೊಂಡು ಸುಮಾರು 15 ವರ್ಷಗಳ ಕಾಲ ಬೇಕರಿ ತಿನಿಸು, ವಿವಿಧ ಐಸ್​ ಕ್ರೀಮ್​ ತಯಾರಿಸುವುದು, ಉತ್ತರ ಭಾರತದ ಅಡುಗೆ ಮುಂತಾದ ರುಚಿ ಸುಚಿಯಾದ ಹಾಗೂ ಆರೋಗ್ಯವಾದ ಅಡುಗೆಯನ್ನು ಮಾಡುವದನ್ನು ಇತರರಿಗೂ ತಿಳಿಸಿಕೊಟ್ಟಿದ್ದೇವೆ ಎಂದು ರಜನಿ ಪಾಟೀಲ ಹೇಳಿದರು.
ಅಧ್ಯೆ ಜಯಶ್ರೀ ಉಗಲಾಟದ ಮಾತನಾಡಿ, ಪಂಚಮಸಾಲಿ ಸಮಾಜದ ಎಲ್ಲ ಮಹಿಳೆಯರು ಒಗ್ಗಟ್ಟಾಗಿ ಸಮಾಜವನ್ನು ಬೆಳೆಸಬೇಕು ಎಂದರು.
ಜಯಶ್ರೀ ಪಾಟೀಲ, ಶಾಂತಾ ತುಪ್ಪದ, ಸುಮಾ ಪಾಟೀಲ್​, ರೇಣುಕಾ ಅಮಾತ್ಯ, ಜ್ಯೋತಿ ದಾನಪ್ಪಗೌಡರ, ಮಾಧುರಿ ಮಳೆಕೊಪ್ಪ, ಶಶಿಕಲಾ ಮಾಲಿಪಾಟೀಲ, ನಾಗರತ್ನ ಮಾರನಬಸರಿ, ಈರಮ್ಮ ಮಾಡಲಗೇರಿ, ಸುಷ್ಮಾ ಸಂಕಣ್ಣವರ, ಗೀತಾ ಉಗಲಾಟದ, ವಿಜಯಶ್ರೀ ಇಳಕಲ, ಮಾಲತಿ ಓಲಪ್ಪನವರ, ಕುಸುಮ ಹಡಗಲಿ, ಸುನಂದ ಪಾಟೀಲ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net