ಚುನಾವಣೆ ಹೊತ್ತಲ್ಲೇ ಕೇರಳದಲ್ಲಿ ಬಾಂಬ್ ಸ್ಫೋಟ

bomb k
Published on

ತಿರುವನಂತಪುರಂ: ರಾಜಕೀಯ ಬಿಗುವಿನ ನಡುವೆಯೇ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದ ಬಾಂಬ್ ಸ್ಫೋಟದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಆದರೆ ಸ್ಫೋಟದಲ್ಲಿ ಯಾರಿಗೂ ಗಾಯವಾಗದ ಕಾರಣ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ. ಚಕ್ಕರಕ್ಕಲ್ ಬಳಿಯ ಬಾವೊಡೆ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು, ಆ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸಮೀಪದಲ್ಲಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಕ್ಷಣ ಸ್ಥಳಕ್ಕಾಗಮಿಸಿದ ಬಾಂಬ್ ಸ್ಕ್ವಾಡ್ ಶೋಧ ಕಾರ್ಯ ಕೈಗೊಂಡಿದ್ದು, ಬಾಂಬ್ ಎಸೆದವರು ಯಾರು ಎಂಬುದು ಇನ್ನೂ ದೃಢಪಟ್ಟಿಲ್ಲ ಎಂದು ಅವರು ತಿಳಿಸಿದ್ದಾರೆ.

ಏತನ್ಮಧ್ಯೆ, ಹೆಸರು ಹೇಳಲು ನಿರಾಕರಿಸಿದ ಪೊಲೀಸ್ ಅಧಿಕಾರಿಗಳು, ಸ್ಫೋಟಕ ವಸ್ತುವು ಐಸ್ ಕ್ರೀಮ್ ಬಾಲ್ ಕಂಟೈನರ್ ರೂಪದಲ್ಲಿದೆ ಎಂದು ಹೇಳಿದರು.

ಭಾನುವಾರ ದೇವಸ್ಥಾನದ ಉತ್ಸವದ ವೇಳೆ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಸೋಮವಾರ ಬೆಳಗ್ಗೆ ನಡೆದ ಬಾಂಬ್ ಸ್ಫೋಟವು ಕೋಲಾಹಲಕ್ಕೆ ಕಾರಣವಾಯಿತು. ಘಟನೆಯ ಬಗ್ಗೆ ಚಕ್ಕರಕ್ಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net