ಕೇರಳದಲ್ಲಿ ನಿಫಾ ವೈರಸ್​​ ಹಿನ್ನೆಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಹಿಂಪಡೆದ ಸರ್ಕಾರ, ಸೋಂಕಿತರ ಸಂಖ್ಯೆ ಶೂನ್ಯ

sp
Published on

ಕೇರಳ: ದೇವರ ನಾಡು ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿ ಇದೆ ಎಂದು ಕೇರಳ ರಾಜ್ಯ ಸರ್ಕಾರ ಹೇಳಿದೆ. ಕೇರಳ ರಾಜ್ಯಾದ್ಯಂತ 24x7 ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, ರಾಜ್ಯಾದ್ಯಂತ 19 ತಂಡಗಳು ಸಕ್ರಿಯವಾಗಿದ್ದವು. ನಿಫಾ ವೈರಸ್ ಸೋಂಕಿನ ನಿಗ್ರಹಕ್ಕೆ ಇರುವ ಎಲ್ಲಾ ಮಾರ್ಗಸೂಚಿಗಳನ್ನೂ ಕಡ್ಡಾಯವಾಗಿ ಪಾಲನೆ ಮಾಡಲಾಗುತ್ತಿದೆ. ಹೀಗಾಗಿ, ವೈರಾಣು ಹರಡುವಿಕೆ ಕೇರಳದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.


ಕೇರಳದ ಕೋಝಿಕ್ಕೋಡ್​​​ನ ಸೆಪ್ಟೆಂಬರ್ 16 ರಿಂದ ಇಲ್ಲಿಯವೆರೆಗೂ ಯಾವುದೇ ನಿಫಾ ವೈರಸ್​​ ಪ್ರಕರಣಗಳು, ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ಕೆಲವೊಂದಿಷ್ಟು ಜಾಗಗಳ ಪ್ರದೇಶಕ್ಕೆ ಹೇರಿದ್ದ ನಿರ್ಬಂಧವನ್ನ ಹಿಂಪಡೆದಿದೆ.


ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೇರಳದ ಕೋಝಿಕ್ಕೋಡ್​​​ನ ಜಿಲ್ಲಾಧಿಕಾರಿ ಎ ಗೀತಾ ಅವರು ಕಂಟೈನ್‌ಮೆಂಟ್ ವಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳನ್ನು ತೆರೆಯಲಾಗುವುದು ಮತ್ತು ತರಗತಿಗಳು ಬುಧವಾರದಿಂದ ಪ್ರಾರಂಭವಾಗಲಿದೆ. ಆದರೆ ಜನರು, ಸೋಂಕಿನ ವಿರುದ್ಧ ಜಾಗರೂಕರಾಗಿರಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಮತ್ತು ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಒತ್ತಾಯಿಸಿದ್ದಾರೆ.


ಈವರೆಗೆ ಕೇರಳ ರಾಜ್ಯದಲ್ಲಿ 6 ನಿಫಾ ವೈರಸ್ ಸೋಂಕಿತರು ಪತ್ತೆಯಾಗಿದ್ದಾರೆ. ವೈರಾಣು ಹರಡುವಿಕೆ ಕೇರಳದಲ್ಲಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಆರೋಗ್ಯ ಸಚಿವೆ ವೀಣಅ ಜಾರ್ಜ್​​ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net