ಈ ರಾಜ್ಯದ 10 ಜಿಲ್ಲೆಗಳಿಗೆ ಆರೆಂಜ್​​​ ಅಲರ್ಟ್​; ಕರ್ನಾಟಕದ ಹಲವೆಡೆ ಬಿರುಸಿನ ಮಳೆ ಮುನ್ಸೂಚನೆ | IMD Alert

ವಿಜಯವಾಣಿ (18)
Published on

IMD Alert: ವಾಡಿಕೆಗಿಂತ ಮುಂಚಿತವಾಗಿಯೇ ಕರಾವಳಿ ಗಡಿಭಾಗಗಳಿಗೆ ಅಪ್ಪಳಿಸಿರುವ ಮುಂಗಾರು, ಏಕಕಾಲಕ್ಕೆ ಕೇರಳ ಗಡಿಯನ್ನೂ ಪ್ರವೇಶಿಸಿದೆ. ಈ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುತ್ತಿದೆ. ದಕ್ಷಿಣ ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಆಲಪ್ಪುಳದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ಘೋಷಿಸಿದೆ.

ಜೂನ್​ 14-17 ವರುಣಾರ್ಭಟ

ಮುಂದಿನ ದಿನಗಳಲ್ಲಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ. ಜೂನ್ 14ರಿಂದ 17 ರವರೆಗೆ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ದೊರೆತಿದೆ ಎಂದು ವರದಿ ಉಲ್ಲೇಖಿಸಿದೆ. ವರುಣಾರ್ಭಟ ಹಿನ್ನೆಲೆ ಕಣ್ಣೂರಿನ ಜಿಲ್ಲಾಧಿಕಾರಿ ಜೂನ್ 14 ಮತ್ತು 15ರಂದು ಅಂಗನವಾಡಿಗಳು, ಶಾಲಾ-ಕಾಲೇಜು ಮತ್ತು ಬೋಧನಾ ಕೇಂದ್ರಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ.

ಕಣ್ಣೂರು, ಕಾಸರಗೋಡಿಗೆ ರೆಡ್​ ಅಲರ್ಟ್​

ಗುರುವಾರ, ಮುಂಬರುವ ದಿನಗಳಲ್ಲಿ, ವಿಶೇಷವಾಗಿ ಉತ್ತರ ಕೇರಳದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ವಾರದ ಆರಂಭದಿಂದಲೂ ರಾಜ್ಯವು ಭಾರೀ ಮಳೆಯನ್ನು ಅನುಭವಿಸುತ್ತಿದೆ ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬುದನ್ನು ಒತ್ತಿ ಹೇಳಿದೆ. ಕೇರಳದಲ್ಲಿನ ಹವಾಮಾನ ವೈಪರೀತ್ಯ ಕರಾವಳಿ ಕರ್ನಾಟಕದವರೆಗೆ ವಿಸ್ತರಿಸಿದ್ದು, ವ್ಯಾಪಕ ಮಳೆಗೆ ಕಾರಣವಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net