

ತಿರುವನಂತಪುರಂ: ದೇಶದಲ್ಲಿ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಲಾಕ್ಡೌನ್ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಕೇರಳ ಸರ್ಕಾರ ಈ ಬಗ್ಗೆ ಇಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಜನತಾ ಕರ್ಫ್ಯೂ ಅಥವಾ ವೀಕೆಂಡ್ ಲಾಕ್ಡೌನ್ ಮಾಡುವುದಿಲ್ಲ. ಬದಲಿಗೆ ಹಾಟ್ಸ್ಪಾಟ್ಗಳಲ್ಲಿ ವ್ಯಾಪಕವಾದ ಕರೊನಾ ಪರೀಕ್ಷೆಗಳನ್ನು ಮಾಡುತ್ತೇವೆ ಎಂದು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಪಿ ಜಾಯ್ ಅವರು ತಿಳಿಸಿದ್ದಾರೆ. ಇಂದು ನಡೆದ ಉನ್ನತ ಮಟ್ಟದ ಅಧಿಕಾರ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಜಾಯ್ ಅವರು ತಿಳಿಸಿದ್ದಾರೆ.
ಸ್ಥಳೀಯಾಡಳಿತಗಳ ಸಹಕಾರದೊಡನೆ ಪಾಸಿಟಿವ್ ಪ್ರಮಾಣವನ್ನು ನೋಡಿಕೊಂಡು ಕರೊನಾ ಪರೀಕ್ಷೆಗಳನ್ನು ವ್ಯಾಪಕವಾಗಿ ಮಾಡಲಾಗುತ್ತದೆ. ಇದರಿಂದ ಕರೊನಾ ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ರಾಜ್ಯದಲ್ಲಿ ಹರಡುತ್ತಿರುವ ಕರೊನಾದ ಯಾವ ರೂಪಾಂತರ ಕಾರಣ ಎಂಬುದನ್ನು ಪತ್ತೆ ಹಚ್ಚಲು ವೈಜ್ಞಾನಿಕ ಸಮಿತಿ ರಚಿಸಲಾಗಿದೆ ಎಂದು ವಿಪಿ ಜಾಯ್ ತಿಳಿಸಿದ್ದಾರೆ.