ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

KeralaAssembly
Published on

ತಿರುವನಂತಪುರ: ಕೇಂದ್ರ ಸರ್ಕಾರ ಅಂಗೀಕರಿಸಿರುವ ಪರಿಷ್ಕೃತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ಆಗ್ರಹಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಇಂದು ಒಮ್ಮತದಿಂದ ಅಂಗೀಕರಿಸಿದೆ. ಈ ನಿರ್ಣಯ ಅಂಗೀಕರಿಸುವುದರ ಸಂಬಂಧವೇ ಕೇರಳ ಸರ್ಕಾರ ಇಂದು ವಿಶೇಷ ವಿಧಾನಸಭೆ ಅಧಿವೇಶನ ನಡೆಸಿತ್ತು.

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಒಗ್ಗಟ್ಟು ಪ್ರದರ್ಶಿಸಿ ಕೇರಳದ ಎಡರಂಗ ಮತ್ತು ಐಕ್ಯರಂಗ ಸದಸ್ಯರು ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸಿದರು. ವಿಧಾನಸಭೆಯಲ್ಲಿರುವ ಏಕೈಕ ಬಿಜೆಪಿ ಸದಸ್ಯ ರಾಜಗೋಪಾಲ್ ಅವರು ಈ ನಿರ್ಣಯದಲ್ಲಿನ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಆದರೆ, ನಿರ್ಣಯ ಅಂಗೀಕರಿಸುವುದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ.

ಸದನದಲ್ಲಿ ಸಾಮಾನ್ಯ ಒಮ್ಮತ ಏರ್ಪಟ್ಟಿತ್ತು. ಹೀಗಾಗಿ ನಾನು ಅದನ್ನು ವಿರೋಧಿಸುವುದಕ್ಕೆ ಹೋಗಲಿಲ್ಲ. ಇದು ಪ್ರಜಾಪ್ರಭುತ್ವ ಮನೋಭಾವವಾಗಿದೆ. ಒ. ರಾಜಗೋಪಾಲ್, ಬಿಜೆಪಿ ಶಾಸಕ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿರ್ಣಯ ಮಂಡಿಸಿ, ಕಾರ್ಪೊರೇಟ್ ವಲಯಕ್ಕೆ ನೆರವು ನೀಡಲು ಕೇಂದ್ರ ಸರ್ಕಾರ ಕೃಷಿ ಕಾನೂನನ್ನು ಪರಿಷ್ಕರಿಸಿದೆ. ಸಂಸತ್ತಿನ ಸ್ಥಾಯೀ ಸಮಿತಿ ಪರಿಶೀಲನೆಗೆ ರವಾನಿಸದೆಯೇ ಕೃಷಿ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಒಂದೊಮ್ಮೆ ರೈತರ ಪ್ರತಿಭಟನೆ ಮುಂದುವರಿದರೆ ಅದು ಗ್ರಾಹಕ ರಾಜ್ಯವಾಗಿರುವ ಕೇರಳವನ್ನು ತೀವ್ರವಾಗಿ ಬಾಧಿಸಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ವಿಜಯನ್ ನಿರ್ಣಯ ಮಂಡಿಸಿದ ಬಳಿಕ ಎರಡು ಗಂಟೆ ಕಾಲ ಚರ್ಚೆ ನಡೆಯಿತು. ನಂತರ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ನಿರ್ಣಯವನ್ನು ಧ್ವನಿಮತಕ್ಕೆ ಹಾಕಿದರು. ಸದನ ಒಮ್ಮತದಿಂದ ಅದನ್ನು ಅಂಗೀಕರಿಸಿತು. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ParagraphShortcodesFormats 

ತಿರುವನಂತಪುರ: ಕೇಂದ್ರ ಸರ್ಕಾರ ಅಂಗೀಕರಿಸಿರುವ ಪರಿಷ್ಕೃತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ಆಗ್ರಹಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಇಂದು ಒಮ್ಮತದಿಂದ ಅಂಗೀಕರಿಸಿದೆ. ಈ ನಿರ್ಣಯ ಅಂಗೀಕರಿಸುವುದರ ಸಂಬಂಧವೇ ಕೇರಳ ಸರ್ಕಾರ ಇಂದು ವಿಶೇಷ ವಿಧಾನಸಭೆ ಅಧಿವೇಶನ ನಡೆಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net