

ಕೋಲಾರ: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಜೂ.27ರಂದು ಜಿಲ್ಲೆಯಾದ್ಯಂತ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು.
ನಗರ ಒಕ್ಕಲಿಗರ ಸಂದ ಕಚೇರಿಯಲ್ಲಿ ಕೆಂಪೇಗೌಡ ಜಯಂತಿ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮುಖಂಡರು ರ್ನಿಣಯಕೈಗೊಂಡು, ಪ್ರತಿ ಗ್ರಾಮದಿಂದಲೂ ಪಲ್ಲಕ್ಕಿ ಕರೆ ತರಲು ಕ್ರಮವಹಿಸಬೇಕು ಎಂದು ಮುಖಂಡರು ತೀರ್ಮಾನಿಸಿದರು.
ಜಿಲ್ಲಾ ಒಕ್ಕಲಿಗರ ಸಂದ ಅಧ್ಯಕ್ಷ ಕೆ.ವಿ.ಶಂಕರಪ್ಪ ಮಾತನಾಡಿ, ಜಿಲ್ಲೆಯಾದ್ಯಂತ ಹೋಬಳಿಮಟ್ಟದಲ್ಲಿ ಪ್ರವಾಸ ಮಾಡಿ. ಮೊದಲು ಮೆರವಣಿಗೆ ಚಾಲನೆ ನೀಡಿದ ನಂತರ, ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಕ್ರಮವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಮಾಡಲು ತಾಲೂಕಿನ ಕಾಮದೇನುಹಳ್ಳಿಯ ಕೆಎಂಜೆ ಮೌನಿ ಅವರನ್ನು ನೆನೆಪಿಸಿಕೊಳ್ಳಬೇಕಿದೆ. ರಾಜ್ಯದಲ್ಲಿ ಕೋಲಾರದಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಮಾಡಿರುವ ಕೀರ್ತಿ ಅವರಿಗೆ ಸಲ್ಲಬೇಕು ಎಂದರು.
ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ, ಶ್ರೀನಿವಾಸಪುರ ತಾಲೂಕಿನ ಪ್ರತಿಯೊಂದು ಗ್ರಾಮದಿಂದ ಪಲ್ಲಕ್ಕಿಗಳು ಬರುವ ವ್ಯವಸ್ಥೆ ಮಾಡಲಾಗುವುದು. ಜಯಂತಿ ಆಚರಣೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ಮುಖಂಡರಾದ ವಿ.ಕೃಷ್ಣಾರೆಡ್ಡಿ, ಡಾ.ವೇಣುಗೋಪಾಲ್, ಪವನ್ ನಾರಾಯಣಸ್ವಾಮಿ, ಮುರಳಿಗೌಡ, ಮಾಗೇರಿ ನಾರಾಯಣಸ್ವಾಮಿ, ರೋಟರಿ ರಾಮಚಂದ್ರಪ್ಪ, ಹೊದಲವಾಡಿ ವೆಂಕಟೇಶಪ್ಪ, ಯಲವಾರ ರಮೇಶ್, ವೀರವೆಂಕಟಪ್ಪ, ಕೆಂಬೋಡಿ ನಾರಾಯಣಸ್ವಾಮಿ, ಪ್ರಕಾಶ್, ಲಕ್ಷ್ಮಣ್, ಶ್ರೀನಿವಾಸ್, ನಾಗಶೇಖರ್, ಚೌಡೇಗೌಡ ಇದ್ದರು.