ಕೇಜ್ರಿವಾಲ್​ ಗೆ ಮತ್ತೊಂದು ಪ್ರೇಮ ಪತ್ರ ಬಂದಿದೆಯಂತೆ…

Aravind Kejriwal 4 Feb 20
Published on

ನವದೆಹಲಿ: 'ಬಿಜೆಪಿ ಶತಾಯಗತಾಯ ದೆಹಲಿ ಜನರ ಜೀವನವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಪ್ರತಿದಿನ ಈ ಜನರು ಏನಾದರು ಒಂದು ವಿಷಯವನ್ನು ಎತ್ತುತ್ತಾರೆ. ದೆಹಲಿಯ ಮನೆ ಮಗನಾದ ನಾನು ಇರುವವರೆಗೆ ನಿಮಗೇನೂ ಆಗಲು ಬಿಡುವುದಿಲ್ಲ' ಎಂದು ದೆಹಲಿಯ ಸಿಎಂ ಅರವಿಂದ ಕೇಜ್ರಿವಾಲ್​ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾಗೆ ಪ್ರತಿಕ್ರಿಯಿಸಿದರು.

'ನೀವು ಹಾಗೂ ನಿಮ್ಮ ಪಕ್ಷದ ನಾಯಕರು ಮಯಾರ್ದೆಯ ಎಲ್ಲಾ ಮಿತಿಗಳನ್ನು ಮೀರುತ್ತಿದ್ದು ನಿಮ್ಮ ಆಡಳಿತಾತ್ಮಕ, ಸಂವಿಧಾನಾತ್ಮಕ ಜವಾಬ್ದಾರಿಗಳಿಂದ ಓಡಿಹೋಗುತ್ತಿದ್ದೀರಿ. ನಿಮ್ಮ ಸರ್ಕಾರ, ಮೂಲ ಕೆಲಸವನ್ನು ಬಿಟ್ಟು ಜಾಹೀರಾತು ಮತ್ತು ಭಾಷಣಗಳಿಂದ ಜನ ಬೆಂಬಲ ಪಡೆಯುತ್ತಿದೆ. ನಾನು ಈ ವಿಷಯವನ್ನು ಪ್ರಸ್ತಾಪಿಸಿದಾಗ ನೀವು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ನನ್ನನ್ನು ಮೂರ್ಖನ ಹಾಗೆ ಚಿತ್ರಿಸಿದ್ದೀರಿ' ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಸಿಎಂಗೆ ಶನಿವಾರ ಪತ್ರ ಬರೆದಿದ್ದರು. ಈ ಪತ್ರವನ್ನು 'ಪ್ರೇಮ ಪತ್ರ' ಎಂದು ಕೇಜ್ರಿವಾಲ್​ ಅಣಕವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net