ನೈಸರ್ಗಿಕ ಅನಿಲ ಬೆಲೆ ಏರಿಕೆಯಿಂದ 3 ರೂ. ಹೆಚ್ಚಿದ ಸಿಎನ್​ಜಿ, ಪಿಎನ್​ಜಿ ಬೆಲೆ

997245-untitled-design-2021-12-19t091647.823
Published on

ನವದೆಹಲಿ: ಆಮದು ದರ ಹೆಚ್ಚಾಗಿರುವ ಕಾರಣ ಶನಿವಾರದಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಿಎನ್​ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್​) ಹಾಗೂ ಪಿಎನ್​ಜಿ (ಪೈಪ್ಡ್ ನ್ಯಾಚುರಲ್ ಗ್ಯಾಸ್​) ಬೆಲೆಯನ್ನು ತಲಾ 3 ರೂಪಾಯಿ ಏರಿಸಲಾಗಿದೆ.

ನವದೆಹಲಿಯಲ್ಲಿ 75.61 ಇದ್ದ ಸಿಎನ್​ಜಿ ಬೆಲೆ ಪ್ರತಿ ಕೆ.ಜಿಗೆ ರೂ.78.61 ಆಗಿದೆ. ಇದು ಮಾರ್ಚ್​ 7ರ ನಂತರ ಹದಿನಾಲ್ಕನೆ ಬಾರಿ ಆಗಿರುವ ದರ ಏರಿಕೆ. ಅದೇ ರೀತಿ ಪಿಎನ್​ಜಿಯ ಬೆಲೆ 50.59 ರಿಂದ 53.59ಕ್ಕೆ ಏರಿಕೆ ಆಗಿದೆ. ಇದು ಅಗಸ್ಟ್​ 2021ರ ನಂತರ ಹತ್ತನೇ ಬಾರಿ ಆಗಿರುವ ಏರಿಕೆ.

' ಸಿಎನ್​ಜಿ ಹಾಗೂ ಪಿಎನ್​ಜಿಗಳ ದರ ನೋಯ್ಡಾ, ಗ್ರೇಟರ್ ನೋಯ್ಡಾ, ಗಾಝಿಯಾಬಾದ್​, ಗುರುಗ್ರಾಮ್​, ಕಾನ್ಪುರ್ ಮುಂತಾದ ನಗರಗಳಲ್ಲೂ ಏರಿಕೆಯಾಗಿದೆ' ಎಂದು ಐಜಿಎಲ್​ (ಇಂದ್ರಪ್ರಸ್ಥ ಗ್ಯಾಸ್​ ಲಿಮಿಟೆಡ್​) ಮಾಹಿತಿ ನೀಡಿತು.

ನೈಸರ್ಗಿಕ ಅನಿಲವನ್ನು ಭೂಮಿಯ ಆಳದಿಂದ ಹೊರತೆಗೆದು ಸಂಕುಚಿತಗೊಳಿಸಿ ವಾಹನಗಳಿಗೆ ಬಳಸಿದರೆ ಪೈಪ್​ ಮೂಲಕ ಅಡುಗೆ ಅನಿಲವಾಗಿ ಸರಬರಾಜು ಮಾಡಲಾಗುತ್ತದೆ. ನೈಸರ್ಗಿಕ ಅನಿಲವನ್ನು ವಿದ್ಯುತ್​ ಉತ್ಪಾದನೆಗೆ ಹಾಗೂ ರಸಗೊಬ್ಬರದ ತಯಾರಿಕೆಗೆ ಬಳಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಿಎನ್​ಜಿಯ ಬೆಲೆ ಪ್ರತಿ ಕೆ.ಜಿಗೆ 8-12 ರುಪಾಯಿ ಏರಿದರೆ ಪಿಎನ್​ಜಿಯ ಬೆಲೆ ರೂ.6ರ ವರೆಗೆ ಏರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net