ಕಂಸನ ವಂಶಸ್ಥರನ್ನು ಮುಗಿಸಲೆಂದೇ ಕೇಜ್ರಿವಾಲ್​​ರನ್ನು ದೇವರು ಕಳಿಸಿದ್ದಂತೆ...!

Aravind kejrival
Published on

ನವದೆಹಲಿ: 'ನಾನು ಜನ್ಮಾಷ್ಟಮಿಯಂದು ಹುಟ್ಟಿದ್ದು. ಕಂಸನ ವಂಶದವರನ್ನು ನಾಶ ಮಾಡಲೆಂದೇ ನನ್ನನ್ನು ದೇವರು ಭೂಮಿಗೆ ಕಳುಹಿಸಿದ್ದು' ಎಂದು ಗುಜರಾತ್​ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಹೇಳಿದ್ದಾರೆ.

ವಡೋದರಾದಲ್ಲಿ ಕೇಜ್ರಿವಾಲ್​ರ 'ತಿರಂಗಾ ಯಾತ್ರಾ'ವನ್ನು ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಕೂಗಿ ವಿರೋಧಿಸಿದರು. ಅನೇಕ ಜಾಗಗಳಲ್ಲಿ ಕೇಜ್ರಿವಾಲ್​ ಕಡೆಗೆ ಕಪ್ಪು ಬಾವುಟ ತೋರಿಸಿದರು. ಆಪ್​ ಮಂತ್ರಿ ರಾಜೇಂದ್ರಪಾಲ್ ಹಿಂದೂ ದೇವತೆಗಳನ್ನು ಅವಮಾನಿಸಿದ ಘಟನೆ ಇನ್ನೂ ಮಾಸಿರದ ವೇಳೆಯಲ್ಲಿ ಇದೆಲ್ಲವೂ ನಡೆದಿದೆ.

'ನ್ಯಾಯ್ ಮಂದಿರ್' ಪ್ರದೇಶದಿಂದ ಸಂಜೆ 4.30 ಕ್ಕೆ ಹೊರಡಲಿದ್ದ ಯಾತ್ರೆ ಬಿಜೆಪಿ-ಆಪ್ ಕಾರ್ಯಕರ್ತರ ಗದ್ದಲದಿಂದಾಗಿ 2 ಗಂಟೆ ತಡವಾಗಿ ಹೊರಟಿತು. ಅದೇ ವೇಳೆ ಕೆಲವು ಆಪ್​ ಪೋಸ್ಟರ್​ಗಳನ್ನು ಹರಿದು ಹಾಕಲಾಯಿತು.

ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್​, 'ನಾನು ಹನುಮಂತ ದೇವರ ಭಕ್ತ. ಬಿಜೆಪಿ ಹಾಕಿರುವ ಪೋಸ್ಟರ್​ಗಳಲ್ಲಿ ದೇವರನ್ನು ಅವಮಾನಿಸುವ ಅಂಶಗಳಿವೆ. ಈಗ ಅನೇಕ ಆಸುರೀ ಶಕ್ತಿಗಳು ಕಂಸನ ವಂಶಜರ ರೂಪದಲ್ಲಿ ನನ್ನನ್ನು ಸೋಲಿಸಲು ಬರುತ್ತಿವೆ' ಎಂದು ಟಾಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net