

ಸಿನಿ ಪ್ರಿಯರಿಗೆ ಗೊತ್ತಿರುವ ಹಾಗೆ ತೆಲುಗು ಮತ್ತು ತಮಿಳಿನ ಜನಪ್ರಿಯ ನಟಿ ಕೀರ್ತಿ ಸುರೇಶ್, 2018ರಲ್ಲಿ ಬಿಡುಗಡೆಯಾದ ನಾಗ್ ಅಶ್ವಿನ್ ಅವರ 'ಮಹಾನಟಿ' ಚಿತ್ರದಲ್ಲಿನ ನಟಿ ಸಾವಿತ್ರಿ ಪಾತ್ರಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. 2021ರ ಫೋರ್ಬ್ಸ್ ಇಂಡಿಯಾದಲ್ಲೂ ಕೀರ್ತಿ ಸ್ಥಾನ ಪಡೆದಿದ್ದಾರೆ. ಕೀರ್ತಿ ಪ್ರಸ್ತುತ ಮುಂಬರುವ ಚಿತ್ರ ಮಾಮನ್ನನ್ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಉದಯನಿಧಿ ಸ್ಟಾಲಿನ್ ನಾಯಕನಾಗಿ ನಟಿಸುತ್ತಿದ್ದು, ವಡಿವೇಲು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವು ಜೂನ್ 29 ರಂದು ಬಿಡುಗಡೆಯಾಗಲಿದ್ದು, ಕೀರ್ತಿ ಸುರೇಶ್ ಸದ್ಯ ಈ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಾಮಣ್ಣನ್ ರಾಜಕೀಯ ಥ್ರಿಲ್ಲರ್ ಎಂದು ಹೇಳಲಾಗುತ್ತಿದೆ.
ಟಾಲಿವುಡ್ನಲ್ಲಿ ಕೀರ್ತಿ ಸುರೇಶ್ ಕೊನೆಯ ಬಾರಿಗೆ ಸಾಹಸ ಚಿತ್ರ ದಸರಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ನ್ಯಾಚುರಲ್ ಸ್ಟಾರ್ ನಾನಿ ಅವರೊಂದಿಗೆ ಪರದೆಯನ್ನು ಹಂಚಿಕೊಂಡಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿತ್ತು.
ಅಂದಹಾಗೆ ಕೀರ್ತಿ ಚಿತ್ರದ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ವೇಳೆ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದಲ್ಲಿ ರಾಜಕೀಯ ಪ್ರವೇಶದ ಕುರಿತು ಪ್ರತಿಕ್ರಿಯಿಸಿದ್ದು, ಈ ಹೇಳಿಕೆ ಕೀರ್ತಿ ಭವಿಷ್ಯದಲ್ಲಿ ರಾಜಕೀಯ ಪ್ರವೇಶ ಮಾಡುವ ಆಸಕ್ತಿ ಸೂಚಿಸುತ್ತದೆ. ಈ ಹಿಂದೆ ಕೀರ್ತಿ ಸುರೇಶ್ ಬಿಜೆಪಿ ಸೇರುತ್ತಾರೆ ಎಂದು ಚಿತ್ರರಂಗದಲ್ಲಿ ಭಾರೀ ಸುದ್ದಿಯಾಗಿತ್ತು. ಆದರೆ ಕೀರ್ತಿ ಸುರೇಶ್ ತಾಯಿ ಮೇನಕಾ ಸುರೇಶ್ ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಮುಂದೆ ಕೀರ್ತಿ ಸುರೇಶ್ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಸ್ತುತ ಕೀರ್ತಿ ಅವರು ಸಚಿವ ಉದಯ ನಿಧಿ ಸ್ಟಾಲಿನ್ ಅವರೊಂದಿಗೆ ಚಿತ್ರ ಮಾಡುತ್ತಿರುವ ಕಾರಣ ಕೀರ್ತಿ ಕಾಮೆಂಟ್ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಸಿನಿಮಾದ ಶೂಟಿಂಗ್ ವೇಳೆ ಇವರಿಬ್ಬರ ನಡುವೆ ಒಳ್ಳೆ ಗೆಳೆತನ ಏರ್ಪಟ್ಟಿತ್ತು ಎನ್ನಲಾಗಿದೆ. ಹಾಗಾಗಿ ಈ ಪರಿಚಯದೊಂದಿಗೆ ಕೀರ್ತಿ ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರಬಹುದು ಎಂಬ ಸುದ್ದಿ ಹರಡಿದೆ.