ಇಂದು ಸಂಜೆಯಿಂದ ಕೆಇಎ ಆಪ್ಷನ್ ಎಂಟ್ರಿ ಆರಂಭ; 9000 ಸೀಟು ಹಂಚಿಕೆಗೆ ಲಭ್ಯ

kea
Published on

ಬೆಂಗಳೂರು: ಕೆಇಎ ಆಪ್ಷನ್ ಎಂಟ್ರಿ ಇಂದು (ಆಗಸ್ಟ್ 5) ಸಂಜೆಯಿಂದ ಆರಂಭವಾಗಲಿದೆ. ಆಪ್ಷನ್ ಎಂಟ್ರಿಯಲ್ಲಿ 9000 ಸೀಟು ಹಂಚಿಕೆಗೆ ಲಭ್ಯವಾಗಲಿವೆ. ಕೆಇಎ ಕೆಸಿಇಟಿ ಕೌನ್ಸಿಲಿಂಗ್ ಮೂಲಕ ಕರ್ನಾಟಕದ 90 ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ ಪ್ರವೇಶಾತಿ ಸೀಟ್‌ಮ್ಯಾಟ್ರಿಕ್ಸ್‌ ಸಂಬಂಧಿಸಿದಂತೆ, ಅಂತಿಮ ಹಂಚಿಕೆ ಪಟ್ಟಿಯಿಂದ 9,000 ಸೀಟುಗಳನ್ನು ಕೈಬಿಡಲಾಗಿತ್ತು.

ಇಂಜಿನಿಯರಿಂಗ್ ಕೋರ್ಸ್​ಗೆ ಸಂಬಂಧಿಸಿದಂತೆ ಅಂತಿಮ ಹಂಚಿಕೆ ಪಟ್ಟಿಯಿಂದ ಕೈಬಿಡಲಾದ ಸೀಟುಗಳನ್ನು ಇಂದು ಸಂಜೆ 5 ರಿಂದ ಆಗಸ್ಟ್ 8 ರವರಿಗೆ ಆಪ್ಷನ್ ಎಂಟ್ರಿಗೆ ಅವಕಾಶ ಕೊಡಲಾಗಿದೆ.

ಆಪ್ಷನ್ ಎಂಟ್ರಿಯಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಹೇಳಿದರು.

9,000 ಸೀಟುಗಳನ್ನು ಉನ್ನತ ಶಿಕ್ಷಣ ಇಲಾಖೆ ಮತ್ತೆ ಸೇರಿಸಿದ್ದು, ಇಷ್ಟು ಸೀಟು ಹಂಚಿಕೆಗೆ ಲಭ್ಯವಾಗಿದೆ. ಇಂದು ಸಂಜೆ 5 ರಿಂದ ಆಗಸ್ಟ್ 9 ರವರೆಗೆ ಆಪ್ಷನ್ ಎಂಟ್ರಿಗೆ ಅವಕಾಶ ಇರುತ್ತದೆ. ಕೆಲವು‌ ದಾಖಲೆಗಳನ್ನು ಒದಗಿಸಿಲ್ಲ ಎನ್ನುವ ಕಾರಣಕ್ಕೆ ಸೀಟು ಹಂಚಿಕೆ ಪ್ರಕ್ರಿಯೆಯಿಂದ ಹೊರಗಿಡಲಾಗಿತ್ತು. ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ಷರತ್ತು ವಿಧಿಸಿ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಿದೆ. ನಿಗದಿತ ಅವಧಿಯೊಳಗೆ ಕಾಲೇಜುಗಳಿಗೆ ಅಗತ್ಯ ಇರುವ ದಾಖಲೆಗಳನ್ನು ಒದಗಿಸಬೇಕು. ಎಲ್ಲ ಕೋರ್ಸ್‌ಗಳಿಗೆ ಆಪ್ಷನ್ ಎಂಟ್ರಿ ಮಾಡುವ ಪ್ರಕ್ರಿಯೆ ಇಂದು ಸಂಜೆ ಆರಂಭವಾಗಲಿದೆ.

ಎಲ್ಲ ಕೋರ್ಸ್ ಗಳಿಗೂ ಏಕಕಾಲದಲ್ಲಿ ಆಪ್ಷನ್ ಎಂಟ್ರಿ ಮಾಡುವ ಅವಕಾಶ ಕಲ್ಪಿಸಲಾಗಿದೆ. ಸೀಕ್ರೆಟ್ ಕೀ ಆನ್ ಲೈನ್ ಮೂಲಕ UGCET-23 ಪರಿಶೀಲನೆ ಕಡ್ಡಾಯವಾಗಿ ಮಾಡಬೇಕು. ಕೋರ್ಸ್ ಸ್ಲಿಪ್ ಪಡೆದಿರುವ ಅಭ್ಯರ್ಥಿಗಳು, ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. UG NEET-23 ಕ್ಕೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಲ್ಲಿ ಸೀಕ್ರೆಟ್ ಕೀಯನ್ನು ವೈದ್ಯಕೀಯ ಕೋರ್ಸ್ ಗಳ ಆಪ್ಷನ್ ಎಂಟ್ರಿಗೆ ಬಳಸಬೇಕು. ಅಭ್ಯರ್ಥಿಗಳು www.kea.kar.nic.in ವೆಬ್ಸೈಟ್ ನಲ್ಲಿ KEA ಆಪ್ಷನ್ ಎಂಟ್ರಿ ಅರ್ಜಿ ಸಲ್ಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net