ಕವಿವಿ ಪತ್ರಿಕೋದ್ಯಮ ವಿಭಾಗ ಚಾಂಪಿಯನ್

ಕವಿವಿ ಪತ್ರಿಕೋದ್ಯಮ ವಿಭಾಗ ಚಾಂಪಿಯನ್
ಕವಿವಿ ಪತ್ರಿಕೋದ್ಯಮ ವಿಭಾಗ ಚಾಂಪಿಯನ್
Published on
ಧಾರವಾಡ: ತುಮಕೂರು ವಿಶ್ವವಿದ್ಯಾಲಯ ಆಯೋಜಿಸಿದ್ದ `ಇಂಪ್ರೆಷನ್ 2026' ಮಾಧ್ಯಮ ಹಬ್ಬದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಉತ್ಸವದಲ್ಲಿ ರಾಜ್ಯಾದ್ಯಂತ ಸುಮಾರು 15 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿ 300ಕ್ಕೂ ಹೆಚ್ಚು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೈಸೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಹಾವೇರಿ, ಬೆಂಗಳೂರು ಮತ್ತು ತುಮಕೂರು ಸೇರಿ ವಿವಿಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನ್ಯೂಸ್ ಪ್ರೆಸೆಂಟೇಷನ್ ಸ್ಪರ್ಧೆಯಲ್ಲಿ ದಿನೇಶ ಗೌಡ ಪ್ರಥಮ, ಪೋಸ್ಟರ್ ಮೇಕಿಂಗ್ ರೂಪಾ ಕುಂಬಾರ್ ಪ್ರಥಮ, ರೀ¯್ಸï ಮೇಕಿಂಗ್ ಚೇತನ್ ನಿಡಗುಂದಿ ಪ್ರಥಮ, ಪುಟ್ಕತೆ ಭೀಮಪ್ಪ ಮಟ್ಯಾಳ ಪ್ರಥಮ, ಪಿಟುಸಿ ಸಂಜನಾ ಕುಲಕರ್ಣಿ ತೃತೀಯ, ವರದಿಗಾರಿಕೆ ದಿನೇಶ ಗೌಡ ತೃತೀಯ, ರಸಪ್ರಶ್ನೆ ಸಪ್ನಾ ಭಾಟಿ ಹಾಗೂ ಮೋಹನ್ ಪಲ್ಲೇದ್ ತೃತೀಯ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳು ವಿಭಾಗಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಕವಿವಿ ಕುಲಪತಿ ಪ್ರೊ. ಎ.ಎಂ. ಖಾನ್, ಆಡಳಿತ ಕುಲಸಚಿವ (ಪ್ರಭಾರ) ಪ್ರೊ. ಮೃತ್ಯುಂಜಯ ಅಗಡಿ, ಸಿಂಡಿಕೇಟ್ ಸದಸ್ಯ ರಾಬರ್ಟ್ ದದ್ದಾಪುರಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸಂಜಯಕುಮಾರ ಮಾಲಗತ್ತಿ, ವಿಭಾಗದ ಪ್ರಾಧ್ಯಾಪಕ ಪ್ರೊ. ಜೆ.ಎಂ. ಚಂದುನವರ, ಪ್ರೊ. ಮಂಜುನಾಥ ಅಡಿಗಲ್ ಅಭಿನಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net