ಕವಿಪವಿಯಿಂದ ವಸಂತ ನಾಡಿಗೇರ್‌ಗೆ ಶ್ರದ್ಧಾಂಜಲಿ

nadiger7
Published on

ಬೆಂಗಳೂರು:
ಸರಳ ಸಜ್ಜನಿಕೆ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದ ಹಿರಿಯ ಪತ್ರಕರ್ತ ವಸಂತ ನಾಡಿಗೇರ್ ಅವರು ಸುದ್ದಿಮನೆಯಲ್ಲಿ ತನ್ನದೇ ಆದ ವಿಭಿನ್ನ ಛಾಪು ಮೂಡಿಸಿದವರು ಎಂದು ಹಿರಿಯ ಪತ್ರಕರ್ತರು ಶ್ಲಾಸಿದರು.
ಕವಿಪವಿ ವತಿಯಿಂದ ಪ್ರೆಸ್ ಕ್ಲಬ್ ಆ್ ಬೆಂಗಳೂರು ಸಹಯೋಗದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ಅವರ ಗುಣಗಾನ ಮಾಡಿದ್ದಲ್ಲದೆ, ವಸಂತ ನಾಡಿಗೇರ ಅವರ ವ್ಯಕ್ತಿತ್ವ ನೆನಪಿಸಿಕೊಂಡರು.
ಸಂಯುಕ್ತ ಕರ್ನಾಟಕದ ಸಮೂಹ ಸಂಪಾದಕರಾದ ಹುಣಸವಾಡಿ ರಾಜನ್ ಮಾತನಾಡಿ, ವಸಂತ ನಾಡಿಗೇರ ಅವರು ಸಜ್ಜನ ವ್ಯಕ್ತಿ ಅಷ್ಟೆ ಅಲ್ಲ, ಅವರೊಬ್ಬ ಮಾದರಿ ಸಂಪಾದಕರಾಗಿದ್ದು, ಯಾವುದೇ ವಿಚಾರವನ್ನು ನಿರ್ಧಿಷ್ಟವಾಗಿ ಹೇಳುವ ವ್ಯಕ್ತಿಯಾಗಿದ್ದರು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ನಿಸ್ವಾರ್ಥ ಭಾವನೆಯ ವ್ಯಕ್ತಿತ್ವ ಅವರದ್ದಾಗಿತ್ತು. ಅತ್ಯಂತ ಸೂಕ್ಷ್ಮ ಮನಸ್ಸಿನ ವ್ಯಕ್ತಯಾಗಿದ್ದು, ಸಣ್ಣ ಸಣ್ಣ ವಿಷಯಗಳಿಗೂ ಕೂಡ ಹೆಚ್ಚು ಗಮನ ಕೊಡುತ್ತಿದ್ದದ್ದು ವಿಶೇಷ ಗುಣ ಅವರಲ್ಲಿತ್ತು ಎಂದರು.
ಪ್ರಜಾವಾಣಿ ಸಂಪಾಕ ರವೀಂದ್ರ ಭಟ್ ಐನಕೈ ಮಾತನಾಡಿ, ವಸಂತ ಅವರ ವ್ಯಕ್ತಿತ್ವದ ಕುರಿತು ಸೊಶಿಯಲ್ ಮಿಡಿಯಾದಲ್ಲಿ ಬಂದಿದ್ದನ್ನು ನೋಡಿದ ಮೇಲೆ, ನಾವು ಯಾವದೇ ಪತ್ರಕರ್ತ ಬದುಕಿದ್ದಾಗಲೇ ಅವರ ಬಗ್ಗೆ ಬರೆಯುವಂತಹ ವಾತಾರವಣವನ್ನು ಪತ್ರಿಕಾ ಸಂಘಟನೆಗಳ ಮೂಲಕ ಮಾಡಬೇಕು. ಯಾವುದೇ ಪತ್ರಕರ್ತ ತೀರಿದ ಮೇಲೆ ಅವರನ್ನು ಗುರುತಿಸುವುದು ಸರಿಯಲ್ಲ. ಮೊದಲೇ ಗುರುತಿಸುವಂತಾಗಲಿ ಎಂದರು.
ನಾಡಿಗೇರರ ಹಿರಿಯ ಸಹೋದರ ವಿನಾಯಕ ನಾಡಿಗೇರ ಮಾತನಾಡಿ, ನಾವು ಅಣ್ಣ ತಮ್ಮಂದಿರಾಗಿದ್ದರೂ ಸ್ನೇಹಿತರಂತೆ ಇದ್ದೆವು. ನಾನು ಧಾರವಾಡ ಕವಿವಿಗೆ ಹೋದೆ, ಆಗತಾನೇ ಪತ್ರಕೋದ್ಯಮ ಹೊಸಾ ಕೋರ್ಸ ಶುರುವಾಗಿದೆ ಅದಕ್ಕೆ ಸೇರಿಕೊಳ್ಳು ಅಂತಾ ಹೇಳಿದ್ದೆ. ಅದರಂತೆ ಅವನು ಸೇರಿಕೊಂಡ. ಅದಾದ ಮೇಲೆ ಅವನಾಗಿಯೇ ಬೆಳೆದ ಎಂದರು.
ನಾಡಿಗೇರರ ಪತ್ನಿ ನಂದಾ ಅವರು ಭಾವುಕರಾಗಿ ಮಾತನಾಡಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಕವಿಪವಿ ಅಧ್ಯಕ್ಷ ಪ್ರವೀಣ್ ಶಿರಿಯಣ್ಣವರ್, ಪ್ರಧಾನ ಕಾರ್ಯದರ್ಶಿ ಅನಿಲ್ ಬಾಸೂರ, ಹಿರಿಯ ಪತ್ರಕರ್ತ ಶಂಕರ್ ಪಾಗೋಜಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net