ಬೆಂಗಳೂರು ಬಂದ್: ನಾಳೆ ಹೋಟೆಲ್​ಗಳು ತೆರೆದಿರುತ್ತವೆಯೇ?; ಇಲ್ಲಿದೆ ಸಂಘದ ಅಧ್ಯಕ್ಷರ ಸ್ಪಷ್ಟನೆ..

Hotel Association
Published on

ಬೆಂಗಳೂರು: ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಸಂಘರ್ಷ ತೀವ್ರಗೊಂಡಿದ್ದು, ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಾಳೆ ಬೆಂಗಳೂರು ಬಂದ್ ನಡೆಸುವುದಾಗಿ ಕರೆ ನೀಡಿವೆ.

ಕಾವೇರಿ ನದಿ ನೀರು ವಿಚಾರವಾಗಿ ನಾಳಿನ ಬೆಂಗಳೂರು ಬಂದ್​ಗೆ ಹಲವು ಸಂಘಟನೆಗಳು ಬೆಂಬಲ ಘೋಷಿಸಿದ್ದರೆ, ಇನ್ನು ಕೆಲವು ಸಂಘಟನೆಗಳು ಬೆಂಬಲ ಘೋಷಿಸಿಲ್ಲ. ಹೀಗಾಗಿ ನಾಳಿನ ಬೆಂಗಳೂರು ಬಂದ್​ಗೆ ಸಂಬಂಧಿಸಿದಂತೆ ಗೊಂದಲಗಳು ಉಂಟಾಗಿವೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ಸ್ಪಷ್ಟನೆಯನ್ನು ನೀಡಿದೆ.

ಸ್ವಲ್ಪ ಗೊಂದಲಗಳು ಇರುವುದರಿಂದ ನಾಳಿನ ಬೆಂಗಳೂರು ಬಂದ್​ಗೆ ಕೊಟ್ಟಿರುವ ಸಹಕಾರವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುತ್ತಿದ್ದೇವೆ, ನಾಳೆ ಎಲ್ಲ ಹೋಟೆಲ್​ಗಳು ತೆರೆದಿರುತ್ತವೆ ಎಂಬುದಾಗಿ ಬೃಹತ್​ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸ್ಪಷ್ಟನೆಯನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net