ಕಾಪು ಜಾತ್ರೆಯಲ್ಲಿ ಬಲೂನು ಮಾರುತ್ತಿದ್ದ ಮಕ್ಕಳ ರಕ್ಷಣೆ

Published on

ಉಡುಪಿ: ಪ್ರಸಿದ್ಧ ಕಾಪು ಮಾರಿ ಜಾತ್ರೆಯಲ್ಲಿ ಭಿಕ್ಷಾಟನೆ ಮತ್ತು ಬಲೂನು ಮಾರಾಟ ಮಾಡುತ್ತಿದ್ದ 6 ಮಕ್ಕಳನ್ನು ಬುಧವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ರಕ್ಷಿಸಿದೆ.

ಮಾರಿ ಜಾತ್ರೆಯಲ್ಲಿ ಗದಗ ಮೂಲದ 5 ಮಕ್ಕಳು ಮತ್ತು ಮಧ್ಯ ಪ್ರದೇಶದ 1 ಬಾಲಕ ಸೇರಿ 6 ಮಕ್ಕಳನ್ನು ರಕ್ಷಿಸಲಾಯಿತು. 5 ಬಾಲಕಿಯರು ಮತ್ತು ಓರ್ವ ಬಾಲಕನನ್ನು ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೋಭಾ ಶೆಟ್ಟಿ , ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ , ಕಾರ್ಮಿಕ ಅಧಿಕಾರಿ ಕುಮಾರ್ , ಕಾಪು ಪೊಲೀಸ್ ಉಪ ನಿರೀಕ್ಷಕ ರಾಘವೇಂದ್ರ , ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ , ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಅಂಬಿಕಾ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಶಿಕಲಾ, ಜಿಲ್ಲಾ ನಾಗರಿಕ ಸೇವಾ ಸಮಿತಿಯ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net