ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಅ.28 ಮತ್ತು 29

Published on

ಬೆಂಗಳೂರು:
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವಿವಿಧ 186 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಪೈಕಿ ಹುದ್ದೆಗಳಿಗೆ ಅನುಗುಣವಾಗಿ 1:3 ಅನುಪಾತದಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಕಾರ್ಮಿಕರ ಮಂಡಳಿಯಲ್ಲಿ ಅ.28 ಮತ್ತು 29 ರಂದು ನಡೆಯಲಿದೆ.
ದಾಖಲೆಗಳ ಪರಿಶೀಲನೆಗೆ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಮಂಡಳಿಯ ಠಿಠಿ://ಚ್ಟಚಿಡಿಡಿಚಿ.ಚ್ಟ್ಞಠಿ.ಜಟ.ಜ್ಞಿ/ ಳ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.
ವೆಬ್‌ಸೈಟ್‌ನಲ್ಲಿ ಹೆಸರಿದ್ದು, ಸೂಚನಾ ಪತ್ರ ತಲುಪದಿದ್ದಲ್ಲಿ ಅಂತಹ ಅಭ್ಯರ್ಥಿಗಳು ಸಹ ಮೇಲ್ಕಂಡ ದಿನಾಂಕಗಳಂದು ತಮ್ಮ ಎಲ್ಲಾ ದಾಖಲಾತಿಗಳೊಂದಿಗೆ ಮಂಡಳಿಯ ಕೇಂದ್ರ ಕಛೇರಿ (ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಸಭಾಂಗಣ, ನೆಲಮಹಡಿ. ಕಲ್ಯಾಣ ಸುರಕ್ಷಾ ಭವನ, ಸರ್ಕಾರಿ ಐಟಿಐ ಕಾಲೇಜು ಆವರಣ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-560029) ಇಲ್ಲಿ ನಡೆಯುವ ದಾಖಲಾತಿ ಪರಿಶೀಲನೆಗೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net